ನವದೆಹಲಿ-ಯುವಕರ ಕೌಶಲ್ಯ ಅಭಿವೃದ್ಧಿ ರಾಷ್ಟ್ರೀಯ ಅವಶ್ಯಕತೆ ಮತ್ತು ಸ್ವಾವಲಂಬಿ ಭಾರತದ ಅಡಿಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ವರ್ಚುವಲ್ ಮೂಲಕ ವಿಶ್ವ ಯುವ ಕೌಶಲ್ಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಳೆದ ಆರು ವರ್ಷಗಳಲ್ಲಿ ರೂಪುಗೊಂಡ ಹೊಸ ಸಂಸ್ಥೆಗಳಿಗೆ ಸಂಪೂರ್ಣ ಶಕ್ತಿಯನ್ನು ಸೇರಿಸುವ ಮೂಲಕ ಸ್ಕಿಲ್ ಇಂಡಿಯಾ ಮಿಷನ್‌ಗೆ ಹೊಸದಾಗಿ ಉತ್ತೇಜನ ನೀಡುವ ಬಗ್ಗೆ ಒತ್ತಿ ಹೇಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಕೌಶಲ್ಯಗಳ ಮಹತ್ಚ, ಕೌಶಲ್ಯ ಅಭಿವೃದ್ಧಿ ಸಮಾಜದ ಪ್ರಗತಿಗೆ ನೀಡಿದ ಪ್ರಾಮುಖ್ಯತೆಯ ನಡುವಿನ ಸಂಬಂಧವನ್ನು ಎತ್ತಿ ತೋರಿಸಿದರು. “ನಿಮ್ಮ ಗಳಿಕೆಯೊಂದಿಗೆ ಕಲಿಕೆ ನಿಲ್ಲುವುದಿಲ್ಲ ಎಂಬುದು ಇಂದು ಮುಖ್ಯವಾಗಿದೆ. ಇಂದಿನ ಜಗತ್ತಿನಲ್ಲಿ ನುರಿತ ವ್ಯಕ್ತಿ ಮಾತ್ರ ಬೆಳೆಯುತ್ತಾನೆ. ಇದು ಜನರಿಗೆ ಮತ್ತು ದೇಶಗಳಿಗೆ ಅನ್ವಯಿಸುತ್ತದೆ” ಎಂದು ಮೋದಿ ಹೇಳಿದರು.