ಬೆಂಗಳೂರು- ನಿಮಗೆ ಹೃದಯ ಸಮಸ್ಯೆ ಇದೆಯೇ, ಆಸ್ಪತ್ರೆಗೆ ತೆರಳಿ ಹೃದಯ ಪರೀಕ್ಷೆ ಮಾಡಿಸಲು ಭಯವೇ? ಹಾಗಿದ್ದರೆ ಹಾರ್ಟ್ ಚೆಕಪ್ ಮಾಡಲು ಮೊಬೈಲ್ ವ್ಯಾನ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ!
ಹೌದು, ಫೋರ್ಟಿಸ್ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ “ರೂಟ್‌ನಂ-15” ಎಂಬ ಶೀರ್ಷಿಕೆಯಡಿಯಲ್ಲಿ, ಹಾರ್ಟ್ ಚೆಕಪ್ ಮೊಬೈಲ್ ವ್ಯಾನ್‌ನನ್ನು ರಸ್ತೆಗಿಳಿಸಿದೆ. ಈ ವಾಹನವನ್ನು ಬುಧವಾರ ಕಾರ್ಡಿಯಾಕ್ ಸೈಸನ್ ವಿಭಾಗದ ಮುಖ್ಯಸ್ಥರಾದ ಡಾ.ವಿವೇಕ್ ಜವಳಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಶೇ.60 ರಷ್ಟು ಪ್ರಮಾಣ ಇರುವುದು ಆತಂಕಕಾರಿ ವಿಷಯ. ಬಹುತೇಕರಿಗೆ ಹೃದಯಾಘಾತದ ಬಗ್ಗೆ ಅರಿವಿನ ಕೊರತೆಯಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದರು.