ಸಿರುಗುಪ್ಪ: ನಗರದ ಸರ್ಕಾರಿ ಪ್ರೌಢ ಶಾಲಾ ಸಭಾಂಗಣದಲ್ಲಿ 2021ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಮಾರ್ಗಾಧಿಕಾರಿಗಳಿಗೆ ಪರೀಕ್ಷಾ ಸಿದ್ದತೆ ಪರಿಶೀಲನಾ ಸಭೆಯನ್ನು ಶಾಸಕ ಎಂ.ಎಸ್.ಸೋಮಲಿAಗಪ್ಪ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ದಿನದಿಂದ ದಿನಕ್ಕೆ ಕರೋನಾ ವೈರಸ್ ಇಳಿಮುಖವಾಗುತ್ತಿದ್ದು, ಮೂರನೇ ಅಲೆಯು ಮಕ್ಕಳಿಗೆ ಹರಡದಂತೆ ಎಲ್ಲಾ ಸಿದ್ದತೆಯನ್ನು ಕೈಗೊಳ್ಳಬೇಕು, ಜು.19 ಮತ್ತು 22ರಂದು ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ನಡೆಯುವ ಪ್ರದೇಶದ ಸುತ್ತ 144 ಸೆಕ್ಷನ್ ಜಾರಿಗೊಳಿಸಿ, ಆದೇಶದ ಅನ್ವಯವನ್ನು ಹಾಗೂ ಕರೋನಾ ನಿಯಮ ಪಾಲಿಸಿಕೊಂಡು, ಅಡ್ಡಿ ಆಂತಕಗಳು ಎದುರಾಗದಂತೆ ಪರಿಕ್ಷೆಯನ್ನು ನಡೆಸಿ ತಾಲೂಕಿಗೆ ಉತ್ತಮ ಫಲಿತಾಂಶದ ಕಿರ್ತಿಯನ್ನು ತರಬೇಕೆಂದು ತಿಳಿಸಿದರು.