ಬೆಳಗಾಯಿತು ವಾರ್ತೆ
ಕೊಟ್ಟೂರು: ಕಾಂಗ್ರೇಸ್ ಟಿಕೇಟ್ ಸಿಕ್ಕ ಹಿನ್ನಲೆಯಲ್ಲಿ ಶಾಸಕ ಎಸ್.ಭೀಮಾನಾಯ್ಕ ಪತ್ನಿ ಗೀತಾಬಾಯಿಯೊಂದಿಗೆ ನಾಡಿನ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ವರಿಷ್ಠರು ಮುಂಬರುವ ವಿಧಾನಸಭಾ ಚುನಾವಣೆಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡುವ ಪ್ರಕಟಣೆ ಹೊರಡಿಸಿರುವುದಕ್ಕೆ ಕೃತಜ್ಞತ ಪೂರ್ವಕವಾಗಿ ಇಲ್ಲಿನ ಆರಾಧ್ಯ ದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡು ನನ್ನ ಅಭಿವೃದ್ಧಿಯೇ ನನ್ನ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮತ್ತೊಮ್ಮೆ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ಸಾಧನೆ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಳೆದ 10 ವರ್ಷದಲ್ಲಿ ನಾನು ಮಾಡಿರುವ ಸಾಧನೆ ಅಭಿವೃದ್ದಿ ಮಂತ್ರವನ್ನು ಇರಿಸಿಕೊಂಡು ಮತ ಎಂಬ ಕೂಲಿ ಕೊಡಿ ಎಂದು ಪ್ರತಿ ಮತದಾರರ ಬಳಿ ತೆರಳಿ ಮಾತಯಾಚಿಸುತ್ತೇನೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.
ಮಾಲ್ವಿ ಜಲಾಶಯಕ್ಕೆ ನೀರು ತರುವ ಬೃಹತ್ ಯೋಜನೆ ಕೈಗೊಂಡಿದ್ದು ಚಿಲವಾರ ಬಂಡಿ ಏತ ನೀರಾವರಿ ಯೋಜನೆಗೆ ಜಾರಿಗೆ ಪ್ರಯತ್ನಪಟ್ಟಿರುವ ಬಗ್ಗೆ ಕ್ಷೇತ್ರದ ಜನತೆ ಹೆಮ್ಮೆ ಇದ್ದು ಕೊಟ್ಟೂರು ಭಾಗದಲ್ಲೂ ಸಹ ಈಗಿನ ಬಿಜೆಪಿ ಸರ್ಕಾರದ ಅಸಹಕಾರದ ನಡುವೆಯೂ ಸಾಕಷ್ಟು ಅಭಿವೃದ್ದಿ ಕಾರ್ಯ ಕೈಗೊಂಡಿರುವುದಕ್ಕೆ ನಮಗೆ ಹೆಮ್ಮೆ ಇದೆ. ಇದನ್ನೆ ಆಧಾರವಾಗಿರಿಸಿಕೊಂಡು ಕ್ಷೇತ್ರದ ಜನರಲ್ಲಿ ಮತಯಾಚಿಸುವೆ ಎಂದು ಅವರು ಹೇಳಿದರು.
ಕಾಂಗ್ರೇಸ್ ಟಿಕೇಟ್‌ಗೆ ಅಕಾಂಕ್ಷಿಗಳಾಗಿ ನನ್ನೊಂದಿಗೆ ಪಕ್ಷದಲ್ಲಿನ ಹಿರಿಯರು ಮತ್ತು ಇತರರು ಟಿಕೇಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕಮಾಂಡ್ ನನಗೆ ಟಿಕೇಟ್ ನೀಡಿದ್ದು ಅಕಾಂಕ್ಷಿಗಳ ಪ್ರತಿ ಮನೆಗೆ ತೆರಳಿ ಮತ್ತು ನನ್ನೊಂದಿಗೆ ಇರುವ ಅಣ್ಣ-ತಮ್ಮಂದಿರು ಕಾರ್ಯಕರ್ತರ ಹತ್ತಿರ ಬೆಂಬಲಯಾಚಿಸಿ ಅವರೊಂದಿಗೆ ಪಕ್ಷದ ಪ್ರಚಾರ ಕೈಗೊಳ್ಳುವೆ ಎಂದು ಅವರು ಹೇಳಿದರು.
ಖಾಸಗಿ ವಾಹಿನಿಯೊಂದು ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನನ್ನನ್ನು ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ವಕೀಲರೊಂದಿಗೆ ಸಮಾಲೋಚನೆ ನಡೆಸಿರುವೆ ಎಂದು ಅವರು ಮುಂದಿನ ಅವಧಿಯಲ್ಲಿ ಮತ್ತೆ ಶಾಸಕನಾಗಿ ಆಯ್ಕೆಗೊಳ್ಳುವ ವಿಶ್ವಾಸ ಹೊಂದಿದ್ದು ಕೊಟ್ಟೂರಿನಲ್ಲಿ ನ್ಯಾಯಾಲಯ ತೆರೆಯಲು ತಾಲೂಕು ಆಡಳಿತ ಸೌಧ, ನಿರ್ಮಿಸುವ ಬಹುದೊಡ್ಡ ಕಾರ್ಯವನ್ನು ಕೈಗೊಳ್ಳುವೆ ಇದರ ಜೊತೆಗೆ ಕೊಟ್ಟೂರು ತಾಲೂಕಿಗೆ ಎಲ್ಲಾ ಇಲಾಖೆಗಳ ಕಛೇರಿಗಳನ್ನು ಆರಂಭಿಸುವAತೆ ಸರ್ಕಾರದ ಮೇಲೆ ಒತ್ತಡ ತರುವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೊಟ್ಟೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಐ.ದಾರುಕೇಶ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ ಅಡಿಕಿ ಮಂಜುನಾಥ, ವಕೀಲ ಹನುಮಂತಪ್ಪ, ಅಚೆಮನಿ ಮಲ್ಲಿಕಾರ್ಜುನ . ಕುಮಾರ್, ಎಲ್ಐಸಿ ಮೂಗಣ್ಣ, ಹನುಮಂತಪ್ಪ, ಸತೀಶ್.ನಾಗರಾಜಪ್ಪ. ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.
ವರದಿ: ಕೊಟ್ರೇಶ್ ತೆಗ್ಗಿನಕೇರಿ..