ಕೊಲ್ಕತ್ತಾ: ರಾಷ್ಟçಪತಿ ಚುನಾವಣೆಯಲ್ಲಿ ರಾಷ್ಟಿçÃಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಬುಡಕಟ್ಟು ಸಮುದಾಯದ ಏಳಿಗೆ ನಮ್ಮ ಚಳುವಳಿಯ ಪ್ರಮುಖ ಭಾಗವಾಗಿರುವುದರಿಂದ ಬಿಎಸ್ ಪಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.
ಪ್ರತಿಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಆಯ್ಕೆ ಸಂದರ್ಭದಲ್ಲಿ ಸಮಾಲೋಚನೆ ನಡೆಸದ ಕಾರಣ ಅವರನ್ನು ತರಾಟೆಗೆ ತೆಗೆದುಕೊಂಡ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಭ್ಯರ್ಥಿ ಆಯ್ಕೆಯ ಮೊದಲ ಸಭೆಯಲ್ಲಿ ಕೆಲವು ಪಕ್ಷಗಳಿಗೆ ಮಾತ್ರ ಆಹ್ವಾನ ನೀಡಿದರು ಮತ್ತು ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಕೂಡ ಬಿಎಸ್ಪಿಯನ್ನು ಚರ್ಚೆಗೆ ಆಹ್ವಾನಿಸಲಿಲ್ಲ ಎಂದು ಹೇಳಿದರು.
ಮುಂದುವರೆದು ಪ್ರತಿಪಕ್ಷಗಳು ತಮ್ಮ ಪಕ್ಷದ ವಿರುದ್ಧ ಜಾತಿವಾದಿ ಮನಸ್ಥಿತಿಯನ್ನು ಮುಂದುವರೆಸುತ್ತಿರುವುದರಿAದ, ಬಿಎಸ್ಪಿ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ ಎಂದು ಮಾಯಾವತಿ ಹೇಳಿದರು.