ಟೋಕಿಯೊ, – ಭಾರತದ ಸ್ಟಾರ್ ಬಾಕ್ಸಿಂಗ್ ಆಟಗಾರ್ತಿ ಮೇರಿ ಕೋಮ್ ಪ್ರಸಕ್ತ ಸಾಲಿನ ಟೋಕಿಯೊ ಒಲಿಂಪಿಕ್ಸ್ ಕ್ರೀಡಾ ಕೂಟದ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಮೇರಿ 4-1 ರಿಂದ ಹೆರ್ನಾಂಡೆಜ್ ಗಾರ್ಸಿಯಾ ಮಿಗುಯೆಲಿನಾ ಅವರನ್ನು ಮಣಿಸಿದರು. ಆರಂಭದಿಂದಲೇ ಭರ್ಜರಿ ಪ್ರದರ್ಶನ ನೀಡಿದ ಮೇರಿ ಎದುರಾಳಿ ಒಡ್ಡಿದ ಸವಾಲನ್ನು ಮೆಟ್ಟಿ ನಿಲ್ಲುತ್ತಾ ಸಾಗಿದರು. ಪರಿಣಾಮ ಪಂದ್ಯವನ್ನು ಸುಲಭವಾಗಿ ಗೆದ್ದು ಬೀಗಿದರು. ಮೇರಿ ಅವರು ಜಡ್ಜಗಳ ಮನ ಗೆಲ್ಲುವಲ್ಲಿ ಸಫಲರಾಗಿ ಅಂಕಗಳನ್ನು ಬಾಚಿಕೊಂಡರು. ತಮ್ಮ ನಿಖರ ಪಂಚ್ ಹಾಗೂ ಹುಕ್ ಗಳ ಮೂಲಕ ಮೇರಿ ಮುನ್ನಡೆದರು.
ಮೊದಲ ಗೇಮ್ ನಲ್ಲಿ ಮೇರಿ 30-27 ಅಂಕಗಳೊಂದಿಗೆ ಮುನ್ನಡೆದರು. ಎರಡನೇ ಗೇಮ್ ನಲ್ಲಿ ಜೆಕ್ ಗಣರಾಜ್ಯದ ಆಟಗಾರ್ತಿಯ ಕೈ ಮೇಲಾಯಿತು. ಉಳಿದಂತೆ 29-28, 30-27, 29-28 ರಿಂದ ಸಾಧಿಸಿದರು.