ಬಳ್ಳಾರಿ: ಹಳೆ ಮೊಕ ಗ್ರಾಮದ ಮಾರ್ಕೆಟ್ನಲ್ಲಿ ಸಾರ್ವಜನಿಕರಿಗೆ ಕೋವಿಡ್ -19 ರ ವಿರುದ್ಧ ಲಸಿಕೆ ನೀಡಲಾಯಿತು. ಹಾಗೇಯೇ ಜಾಗೃತಿ ಮೂಡಿಸಲಾಯಿತು. ಸುಮಾರು 100 ಜನ ಸಾರ್ವಜನಿಕರಿಗೆ (ಹಣ್ಣು, ತರಕಾರಿ, ಹಾಗೂ ಸಣ್ಣ ಪುಟ್ಟ ವ್ಯಾಪಾರ ಮಾಡುವವರು, ಅಂಗಡಿಯವರಿಗೆ )ಲಸಿಕೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಕಿಂಗ್ ಮೂಲಕ ಜಾಗೃತಿಯನ್ನು ಮೋಕ ಬಿಹೆಚ್‌ಇಒ ಹಾಗೂ ಹಿ ಆ ನಿರೀಕ್ಷಣಾಧಿಕಾರಿಗಳಾದ ಬಸವರಾಜ್ ಹಾಗು ಪಿಎಸ್‌ಹೆಚ್‌ಒ ನಂದಿನಿ, ಹೆಚ್‌ಐಒ ಎಂಡಿ ಇಶಾಕ್ ಹಾಗೂ ಪಂಚಾಯತಿಯ ಸದಸ್ಯರಾದ ಗುರುಸಿದ್ದಪ್ಪ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.