ಬೆಳಗಾಯಿತು ವಾರ್ತೆ
ಬಳ್ಳಾರಿ: ಮಲೇರಿಯಾ ರೋಗವನ್ನು ತಡೆಗಟ್ಟುವ ನೀಟ್ಟಿನಲ್ಲಿ ಹೆಚ್ಚು ಜಾಗೃತಿಯನ್ನು ಎಲ್ಲಾ ಇಲಾಖೆಯಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಜೂನ್ ತಿಂಗಳಲ್ಲಿ ಮುಂಗಾರು ಪ್ರಾರಂಭ ಆಗುವುದರಿಂದ ಈ ತಿಂಗಳನ್ನು ಆಂಟಿ ಮಲೇರಿಯಾ ತಿಂಗಳು ಎಂದು ಕರೆಯಲಾಗುತ್ತದೆ ಎಂದು ತಾಲ್ಲೂಕ ಆರೋಗ್ಯ ಅಧಿಕಾರಿ ಡಾ. ಮೋಹನ್ ಕುಮಾರಿ ಹೇಳಿದರು.
ನಗರದ ತಾಲ್ಲೂಕ್ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಲೇರಿಯಾ ರೋಗವನ್ನು ತಡೆಗಟ್ಟುವ ನೀಟ್ಟಿನಲ್ಲಿ ಹೆಚ್ಚು ಜಾಗೃತಿಯನ್ನು ಎಲ್ಲಾ ಇಲಾಖೆಯಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಅನಾಫಿಲೀಸ್ ಎಂಬ ಸೊಳ್ಳೆಗಳಿಂದ ಮಲೇರಿಯಾ ರೋಗವು ಬರುತ್ತಿದ್ದು ಇವು ಡೆಂಗ್ಯು, ಆನೇಕಾಲ ರೋಗ, ಮದಳು ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಮೂಲಕ ಸೋಳ್ಳೆಗಳನ್ನ ನಿರ್ಮೂಲನೇ ಮಾಡಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮಲೇರಿಯಾ ಪ್ರಕರಣ ಕಂಡು ಬಂದಲ್ಲಿ ಅಂತವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಕಂಡು ಬಂದ ಮಲೇರಿಯಾ ಪ್ರಕರಣಗಳು: 2016 ರಲ್ಲಿ 20, 2017 ರಲ್ಲಿ 9, 2018 ರಲ್ಲಿ 7, 2019ರಲ್ಲಿ 4, 2020ರಲ್ಲಿ 00, 2021 ರಲ್ಲಿ ಒಂದು ಪ್ರಕರಣ ಕಂಡು ಬಂದಿದ್ದು, ಅದು ಬೇರೆ ತಾಲ್ಲೂಕಿನ ಪ್ರಕರಣವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 197 ಕಡೆ ಲಾರ್ವಾ ಮಿನುಗಳನ್ನ ಬಿಡಲಾಗಿದೆ. ಇವು ಸೊಳ್ಳೆಗಳನ್ನ ತಿಂದು ಮಲೇರಿಯಾ ರೋಗವನ್ನು ತಡೆಗಟ್ಟಲು ಸಹಾಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಹಾಯಕ ನಿರ್ದೇಶಕರಾದ ಬಿ.ಕೆ ರಾಮಲಿಂಗಪ್ಪ, ಡಾ. ಪ್ರತಾಪ್, ಡಾ. ಶಶಿಕುಮಾರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.