ಬಳ್ಳಾರಿ: ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಮಾಳಪುರ ಗ್ರಾಮದಲ್ಲಿನ47.63 ಎಕರೆ ಸರ್ಕಾರಿ ಭೂಮಿಯನ್ನು ನೇರವಾಗಿ ಹೊನ್ನುರಪ್ಪ ಅವರಿಂದ ಖರೀದಿಸಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ ಅವರು ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಜಿಲ್ಲಾಧ್ಯಕ್ಷರಾದ ವಿ.ಎಸ್.ಶಿವಶಂಕರ್ ಅವರು ಪ್ರತಿಪಾಧಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮುವಾರ ಕರ್ನಾಟಕ ಪ್ರಾಂತ ರೈತ ಸಂಘ, ಭೂ ಸಂತ್ರಸ್ತರ ಹೋರಾಟ ಸಮಿತಿ, ಸಂಡೂರು ತಾಲ್ಲೂಕು ಸಮಿತಿಯ ಮುಖಂಡರುಗಳು ಹಮ್ಮಿಕೊಂಡಿದ್ದ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು
ಇದು ಸರ್ಕಾರದ ಭೂಮಿ
ಸರ್ಕಾರ ಹೊನ್ನುರಪ್ಪ ಅವರಿಗೆ ಯಾವುದೇ ಭೂಮಿ ನೀಡಿಲ್ಲ…? ಸರ್ಕಾರದ ಜಮೀನು ಹೊನ್ನುರಪ್ಪ ಅವರಿಗೆ ಹೇಗೆ ಬಂತು ….? ಅವರಿಗೆ ಆ ಜಮೀನು ಯಾರು ಕೊಟ್ಟರು …? ಎಂದು ಪ್ರಶ್ನೀಸಿದ ಅವರು ಸಾಗುವಳಿ ಮಾಡುತ್ತಾ ಬಂದಿದ್ದಾರೆ ಅಷ್ಟೇ ಸಂತೋಷ್ ಲಾಡ್ ಕುಟುಂಬದವರು ಅಕ್ರಮವಾಗಿ ನಕಲಿ ದಾಖಲೇ ಸೃಷ್ಠಿಸಿ ನೊಂದಾವಣಿ ಮಾಡಿಕೊಂಡಿದ್ದಾರೆ. ಆದ್ದರಿಂದ ಅಕ್ರಮವಾಗಿ ನೊಂದಾವಣಿ ಮಾಡಿಸಿಕೊಂಡು ಇದು ನಮ್ಮ ಭೂಮಿ ಎಂದು ಹೇಳುತ್ತಿರುವವರ ವಿರುಧ್ಧ ಜಿಲ್ಲಾಡಳಿತ ಮತ್ತು ಸರ್ಕಾರ ಸಮಗ್ರ ತನಿಖೆ ಮಾಡಬೇಕು ಹಾಗೂ ಸಚಿವರು ನೈತಿಕ ಹೊಣೆ ಹೊತ್ತು ಭೂಮಿ ವಾಪಸ್ ಕೊಡಬೇಕು ಎಂದು ಪ್ರತಿಪಾಧಿಸಿದರು.
ನ್ಯಾಯಾಂಗ ತನಿಖೆಗೆ ಒತ್ತಾಯ
ಮೊದಲು ಹುಬ್ಬಳ್ಳಿಯ ಹೊನ್ನುರಪ್ಪ ಯಾರು …? ಅವರು ಯಾವ ಕಾರಣಕ್ಕಾಗಿ…? ಕೋರ್ಟ್ ಮೊರೆ ಹೋದರು ಎಂದು ಸಂತೋಷ್ ಲಾಡ್ ಅವರು ಸ್ಪಷ್ಟ ಪಡಿಸಲಿ. ಪಹಣಿಯಲ್ಲಿ ಅಕ್ರಮ ತಿದ್ದುಪಡಿ ಮಾಡಿರುವುದನ್ನು ಸಂಡೂರಿನ ತಹಶೀಲ್ದಾರ್ ಹಾಗೂ ತಾಲ್ಲೂಕು ಮ್ಯಾಜಿಸ್ಟ್ರೇಟ್ ರವರು ದಾಖಲೇ ಪರಿಶೀಲಿಸಿ ಮೊಟೇಶನ್ ಮಾಡದೇ ಆಗದೇ ಇರುವದನ್ನು ಲಿಖಿತವಾಗಿ ಸ್ಪಷ್ಟನೆ ನೀಡಿದ್ದಾರೆ. ನಕಲಿ ದಾಖಲೇ ಸೃಷ್ಟಿಸಿ ನೊಂದಾವಣೆ ಮಾಡಿಸಿಕೊಂಡಿದ್ದಾರೆ.ತಮ್ಮ ಸಹಚರನಿಂದ ದಾವೆ ಹೊಡಿಸಿ ನ್ಯಾಯಲಯಕ್ಕೂ ನಕಲಿ ದಾಖಲೇ ನೀಡುವ ಮೂಲಕ ಕ್ರಮಬದ್ಧ ಮಾಡಿ ಕೊಳ್ಳಲು ನ್ಯಾಯಲಯಕ್ಕೆ ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಹಾಲಿ ನ್ಯಾಯದೀಶರಿಂದ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆ
ಸದ್ಯದಲ್ಲೇ ಭೂ ಖಬಳಿಕೆ ಮಾಡಿದ್ದನ್ನು ಖಂಡಿಸಿ ಸಮಗ್ರ ತನಿಖೆ ಮಾಡಬೇಕು ಎಂದು ಮಾಳಪುರ ಗ್ರಾಮದಿಂದ ಬಳ್ಳಾರಿ ವರೆಗೂ ಪಾದಯಾತ್ರೆ ಮಾಡಲಾಗುವುದು ಎಂದರು
ಅಂಜಿನಪ್ಪ ಮಾತನಾಡಿ ಕಳೆದ ಇಪ್ಪತ್ತು ವರ್ಷ ಗಳಿಂದ ಮಾಜಿ ಸಚಿವ ಸಂತೋಷ್ ಅವರ ಹತ್ತಿರ ಹೋಗಿ ಕೇಳಿದರು ಭೂಮಿ ವಾಪಸ್ ಕೊಡಲಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡರು
ಮಹೇಶ್ ಮಾತನಾಡಿ ಗ್ರಾಮಕ್ಕೆ ಬಂದಾಗ ಹಾಗೂ ಚುನಾವಣೆ ಸಮಯದಲ್ಲಿ ಸಂತೋಷ್ ಲಾಡ್ ಅವರನ್ನು ನಮ್ಮ ಭೂಮಿ ನಮಗೆ ಕೊಡುತ್ತೇವೆ ಎಂದು ಬರೀ ಭರವಸೆ ಮಾತ್ರ ನೀಡಿದ್ದಾರೆ ವಿನಹಃ ಭೂಮಿ ಕೊಡಲಿಲ್ಲ ಎಂದರು…
ಈ ಸಂದರ್ಭದಲ್ಲಿ ಎನ್ . ತಿಪ್ಪೇ ಸ್ವಾಮಿ, ಎ.ಸ್ವಾಮಿ, ಎಸ್.ಶಂಕರ್, ಗಾಳಿ ಬಸವರಾಜ್, ಎಂ.ದುರುಗಮ್ಮ, ಪಿ.ಅಂಜಿನೇಯ್ಯ, ಹೊನ್ನುರಪ್ಪ, ಹೊನ್ನುರ ಸ್ವಾಮಿ, ತಿಪ್ಪೇ ಸ್ವಾಮಿ, ಬಸಾಪುರ ಹನುಮಯ್ಯ, ಮಹೇಶ್, ಇತರರು ಇದ್ದರು.