ಕಾನೂನು ಪ್ರಕಾರವಾಗಿ ಭೂಮಿ ಖರೀದಿ ಮಾಡಲಾಗಿದೆ : ಮಾಜಿ ಸಚಿವ ಸಂತೋಷ್ ಲಾಡ್

0
376

ಬಳ್ಳಾರಿ: ಸಂಡೂರು ತಾಲ್ಲೂಕಿನ ಮಾಳಪುರ ಗ್ರಾಮದಲ್ಲಿನ ಭೂಮಿ ಆಕ್ರಮಿಸಲಾಗಿದೆ ಎಂಬ ಆರೋಪ ಕುರಿತಂತೆ ಮಾಜಿ ಸಚಿವ ಸಂತೋಷ್ ಲಾಡ್ ಸ್ಪಷ್ಟೀಕರಣ ನೀಡಿದ ಅವರು ಕಾನೂನು ಪ್ರಕಾರವಾಗಿ ಭೂಮಿ ಖರೀದಿ ಮಾಡಲಾಗಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಮಾಳಪುರ ಗ್ರಾಮದ ಸ.ನಂ.123 ವಿಸ್ತೀರ್ಣ 47ಎಕರೆ 63ಸೆಂಟ್ಸ್ ಭೂಮಿಯನ್ನು ಲಾಡ್ ಕುಟಂಬ ಆಕ್ರಮಿಸಿಲಾಗಿದೆ ಎಂಬ ವಿಚಾರಕ್ಕೆ ಲಾಡ್ ಕುಟಂಬದ ಮೇಲಿರುವ ಆರೋಪದ ಕುರಿತಂತೆ ಸ್ಪಷ್ಟೀಕರಣ ನೀಡಿದ ಅವರು ಭೂಮಿಯನ್ನು ರಾಜಕೀಯ ಮಾಡಿ ಕಬಳಿಸಲಾಗಿದೆ ಎಂಬ ಆರೋಪ ಇದೆ ಕಳೆದ ತಿಂಗಳು ಜೂನ್23ರಂದು ಜಿಲ್ಲಾಧಿಕಾರಿಗಳಿಗೆ ಆ ವಿಚಾರವಾಗಿ ಸ್ಪಷ್ಟೀಕರಣ ಸಹ ನೀಡಲಾಗಿದೆ. ಸದರಿ ಜಮೀನುನ್ನು ಕಾನೂನಿನ ಚೌಕಟ್ಟಿನಲ್ಲಿ ,ಸರ್ಕಾರದ ನಿಯಮನುಸಾರ ಜಮೀನಿನ ಮೂಲ ಪಟ್ಟದಾರರಾದಶಮಕಾಶಿ ಹನುಮಗಾರಿ ಹೊನ್ನುರಪ್ಪ ತಂದೆ ಹನುಮಂತಪ್ಪ ಮಾಳಾಪುರ ಇವರಿಂದ ನಮ್ಮ ಹಿರಿಯರು 1996ರಲ್ಲಿ ಖರೀದಿ ಪತ್ರದ ಮೂಲಕ ಸಂಡೂರಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಖರೀದಿಸಿದ್ದಾರೆ. 1981ರಲ್ಲಿ ಮಕಾಶಿ ಹನುಮಗಾರಿ ಹೊನ್ನುರಪ್ಪ ತಂದೆ ಹನುಮಂತಪ್ಪ ಅವರ ಹೆಸರು ಪಾಣಿಯಲ್ಲಿ ನಮೂದು ಆಗಿರುತ್ತದೆ. 1981ರಿಂದ 1996ರ ವರೆಗೂ ಅವರ ಹೆಸರಿನ ಮೇಲೆ ಪಾಣಿ ಇತ್ತು ಆದರೆ 1996ರಲ್ಲಿ ಭೂಮಿಯನ್ನು ಖರೀದಿ ಮಾಡಲಾಗಿದೆ. 2003ರಲ್ಲಿ ಗಣಕಿಕೃತ ಪಹಣಿಯಲ್ಲಿ ನಮ್ಮ ಕುಟುಂಬದವರ ಹೆಸರುಗಳು ನಮೂದು ಆಗಿರುತ್ತವೆ ಎಂದರು.

ಕೋರ್ಟ್ ವಜಾ

ಸದರಿ ಜಮೀನಿಗೆ ಸಂಬಂಧಿಸಿದಂತೆ 2012 -13ರಲ್ಲಿ ಹುಬ್ಬಳ್ಳಿ ನಿವಾಸಿಗಳಾದ ಹೊನ್ನುರಪ್ಪ ಅವರು ನಮ್ಮ ಮೇಲೆ ಸಂಡೂರಿನ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದರು ವಾದ ಪ್ರತಿವಾದಗಳ ನಂತರ 3/8/ 2017ರಲ್ಲಿ ನ್ಯಾಯಲಯ ನಮ್ಮ ಪರವಾಗಿ ತೀರ್ಪು ನೀಡಿರುತ್ತಾರೆ. ಆದರೂ ಓ.ಎಸ್.ನಂ RA 17/2017ರ ಪ್ರಕಾರ ಪಿರ್ಯಾದುದಾರರು ಹಿರಿಯ ಸಿವಿಲ್ ನ್ಯಾಯಲದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆ ಮೇಲ್ಮನವಿಯ ಕೋರ್ಟ್ ವಜಾ ಮಾಡಿತ್ತು.

ಕೂಡ್ಲಿಗಿ ಯ ನ್ಯಾಯಲಯದಲ್ಲಿ ಪ್ರಕರಣ ಬಾಕಿ

ತದನಂತರ ಸದರಿ ಹೊನ್ನುರಪ್ಪ ಅವರು ನಮ್ಮ ಕುಟುಂಬದ ಸದಸ್ಯರೊಂದಿಗೆ ಸಂಡೂರಿನ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಇವರನ್ನು ಪ್ರಚಿವಾದಿಗಳನ್ನಾಗಿ ಸೇರಿಸಿ ಕೂಡ್ಲಿಗಿಯ ಹಿರಿಯ ಸಿವಿಲ್ ನ್ಯಾಯಲಯದಲ್ಲಿ OS 17/2017ರಂತೆ ಪ್ರಕರಣ ದಾಖಲು ಮಾಡಿರುತ್ತಾರೆ ಈ ಪ್ರಕರಣ ಕೂಡ್ಲಿಗಿ ಯ ನ್ಯಾಯಲಯದಲ್ಲಿ ಬಾಕಿ ಇರುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ
ಮಾಧ್ಯಮಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಅವರು ಕಾನೂನು ಉಲ್ಲಂಘನೆ ಮಾಡಿ ಭೂಮಿ ಕಬಳಿಕೆ ಮಾಡಿದಲ್ಲಿ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಂಡು ಭೂಮಿಯನ್ನು ವಾಪಸ್ ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ ಶಾಸಕ ತುಕರಾಂ, ಅಕ್ಷಯ್ ಲಾಡ್, ಮಾನಯ್ಯ, ಮುಂಡ್ರಗಿ ನಾಗರಾಜ್, ಬಿ.ಎಂ.ಪಾಟೀಲ್ ಸೇರಿದಂತೆ ಇತರರು ಇದ್ದರು.

Previous articleಕಾಂಗ್ರೆಸ್ ಪಕ್ಷದಿಂದ ಕೆ.ಸಿ ಕೊಂಡಯ್ಯನವರ ಜನ್ಮ ದಿನಾಚರಣೆ
Next articleಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಹೈಜಾಕ್ ಮಾಡಲಾಗುತ್ತಿದೆ

LEAVE A REPLY

Please enter your comment!
Please enter your name here