ಬೆಳಗಾಯಿತು ವಾರ್ತೆ
ಬಳ್ಳಾರಿ : ಮಹಾನಗರಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹಲವಾರು ವರ್ಷಗಳಿಂದ ವಾಹನ ಚಾಲಕರು ಹಾಗೂ ಕ್ಲೀನರ್‌ಗಳಾಗಿ ಸೇವೆಯನ್ನು ಸಲ್ಲಿಸುವವರನ್ನು. ಕಾಯಂಗೊಳಿಸುವಂತೆ ಜಿಲ್ಲಾಧಿಕಾರಿ ಕಚೇರಿ ಹತ್ತಿರ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು.
ಸರ್ಕಾರದ ವಿರುದ್ಧ ಘೋಷಣೆ ಹೋಗಿ ಮಾತನಾಡಿದ ವಾಹನ ಚಾಲಕರು. ಬಳ್ಳಾರಿ ಮಹಾನಗರಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹಲವಾರು ವರ್ಷಗಳಿಂದ ವಾಹನ ಚಾಲಕರು ಹಾಗೂ ಕ್ಲೀನರ್‌ಗಳಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ನಾವುಗಳು ಪ್ರತಿದಿನ ಸಾರ್ವಜನಿಕರ ಹಿತ ದೃಷ್ಠಿಯಿಂದ ನಗರದ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ. ಹಾಗೂ ಕೋವಿಡ್-19 ವೈರಸ್ ಹರಡಿರುವ ಸಂದರ್ಭದಲ್ಲಿಯೂ ಜೀವದ ಹಂಗನ್ನು ತೊರೆದು ಸಾರ್ವಜನಿಕರ ಹಿತದೃಷ್ಠಿಯಿಂದ ನಗರದ ಸ್ವಚ್ಛತಾ ಕಾರ್ಯದಲ್ಲಿ ಪೌರಕಾರ್ಮಿಕರೊಂದಿಗೆ ಒಗ್ಗೂಡಿ ಕೆಲಸ ನಿರ್ವಹಿಸಿದ್ದೇವೆ.
ಅದ್ಯಾಗು 2017ರಲ್ಲಿ ಪೌರಕಾರ್ಮಿಕರನ್ನು ಅಂದಿನ ರಾಜ್ಯ ಸರ್ಕಾರ ಖಾಯಂಗೊಳಿಸಲು ನಿರ್ಧರಿಸಿತ್ತು ಅದೇ ಸಂದರ್ಭದಲ್ಲಿ ಪೌರಕಾರ್ಮಿಕರೊಂದಿಗೆ ಕರ್ತವ್ಯ ನಿರ್ವಹಿಸಿದ ನಮ್ಮನ್ನು ಹೊರಗುತ್ತಿಗೆ ಪದ್ದತಿಯಲ್ಲಿ ಉಳಿಸಿ ತಾರತಮ್ಯ ಎಸಗಿದ್ದೀರೆ. ಈ ಕುರಿತು ಕಳೆದ 5 ವರ್ಷಗಳಿಂದ ಹಂತ-ಹಂತವಾಗಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಈಗ ನಿರ್ಣಾಯಕ ಘಟ್ಟವನ್ನು ತಲುಪಿದ್ದು ನಮ್ಮನ್ನು ಸಹ ಪೌರಕಾರ್ಮಿಕರ ಮಾದರಿಯಲ್ಲಿ ಖಾಯಂಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಎಲ್ಲ ವಾಹನ ಚಾಲಕರು ಇದ್ದರು