18.9 C
New York
Saturday, May 28, 2022

Buy now

spot_img

ಗಣೇಶ ಚತುರ್ಥಿಯಂದು ತೆರೆಗೆ ಬರಲಿದೆ “ಲಂಕೆ”

ಬೆಂಗಳೂರು- ಲೂಸ್ ಮಾದ ಯೋಗೇಶ್ ಅಭಿನಯದ “ಲಂಕೆ” ಚಿತ್ರ ಸೆಪ್ಟೆಂಬರ್ 10 ಗಣೇಶನ ಹಬ್ಬದ ಶುಭದಿನದಂದು ರಾಜ್ಯಾದ್ಯಂತ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ಕೆಲವು ಚಿತ್ರಗಳ ಆರಂಭದಲ್ಲೇ ಅನೇಕ ತೊಂದರೆಗಳು ಎದುರಾಗುತ್ತದೆ‌. ಆದರೆ ನಮ್ಮ ಚಿತ್ರ ಯಾವುದೇ ತೊಂದರೆಯಿಲ್ಲದೇ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್. ಅವರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ ನಿರ್ದೇಶಕ ರಾಮಪ್ರಸಾದ್ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ನಮ್ಮ ತಂದೆಯವರು ನಿರ್ಮಿಸಿದ್ದ ಚಿತ್ರಗಳಲ್ಲೇ ಇಷ್ಟು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿಲ್ಲ.. ಆದರೆ ಈ ಚಿತ್ರದ ಎಲ್ಲಾ ರೀತಿಯ ಪ್ರಚಾರಕಾರ್ಯಗಳಲ್ಲೂ ನಾನು ಭಾಗಿಯಾಗಿದ್ದೇನೆ ಎಂದ ನಾಯಕ ಲೂಸ್ ಮಾದ ಯೋಗೇಶ್ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಿದೆ. ಗಣಪತಿ ಹಬ್ಬಕ್ಕೆ ಚಿತ್ರ ಬರುತ್ತಿದೆ ನೋಡಿ ಹಾರೈಸಿ ಎಂದರು.ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಸುರೇಖ ರಾಮಪ್ರಸಾದ್ ಹಾಗೂ ಕಲಾವಿದರಾದ ಮಾಸ್ಟರ್ ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ‌ ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು.ರಾಮಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್ ನಾಗವಾರ ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್, ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,333FollowersFollow
0SubscribersSubscribe
- Advertisement -spot_img

Latest Articles