ಬಳ್ಳಾರಿ: ನಗರದ ತಾಲೂಕು ಕಚೇರಿ ಆವರದಲ್ಲಿನ ತೋಟಗಾರಿಕೆ ಇಲಾಖೆಯಲ್ಲಿ ಮೆಣಸಿನ ಕಾಯಿ ಬೀಜ ಕೊಡುವಂತೆ ಒತ್ತಾಯಿಸಿ ನೂರಾರು ಜನ ರೈತರು ತೋಟಗಾರಿಕೆ ಅಧಿಕಾರಿಗಳನ್ನು ಮುತ್ತಿಗೆ ಹಾಕಿದರು ….
ಸೋಮವಾರ ಮೆಣಸಿನಕಾಯಿ ಬೀಜ ಬೀಜ ಸಿಗದೆ ಕಾಲಿ ಕೈಯಲ್ಲಿ ಮನೆಗೆ ಹಿಂದುರಿದ್ದ ರೈತರು ಮಂಗಳವಾರ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಯಾವುದೇ ಮೆಣಸಿನಕಾಯಿ ಬೀಜ ಮಾರಟ ಮಾಡಲಾಗುವುದಿಲ್ಲ ಎಂಬ ಬೋರ್ಡ್ ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ನೇತಾಕಿದ್ದರು ಅದನ್ನು ಲೆಕ್ಕಿಸದೇ ಮೆಣಸಿನಕಾಯಿ ಬೀಜ ಕ್ಕಾಗಿ ಬೆಳ್ಳಂ ಬೆಳಿಗ್ಗೆಯಿಂದ ಕಾದೂ ಕುಳಿತಿದ್ದರು….
ಈ ವೇಳೆ ಧಾವಿಸಿ ಬಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮೆಣಸಿನ ಕಾಯಿ ಬೀಜಗಳು ಸದ್ಯ ಸ್ಟಾಕ್ ಇಲ್ಲ ಕಾಲಿ ಆಗಿವೆ ಸೋಮವಾರ ಬನ್ನೀ ಕೋಳೂರು ,ಮೋಕ, ರೂಪನಗುಡಿ, ಕುರುಗೋಡು ಓಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮೆಣಸಿನಕಾಯಿ ಬೀಜಗಳನ್ನು ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ರೈತರನ್ನು ಮನವೊಲಿಸಲು ಮುಂದಾದರು ಇದಕ್ಕೆ ಒಪ್ಪದ ರೈತರು ನೀವೂ ಸುಳ್ಳು ಹೇಳೂತ್ತಿದ್ದೀರಿ ನಿಮಗೆ ಬೇಕಾದವರಿಗೆ ಮಾತ್ರ ಬೀಜ ಕೊಡುತ್ತಿದ್ದೀರಿ ಹೊರಗಡೆ ಹೆಚ್ಛಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಟವಾಗುತ್ತಿವೆ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು……
ಪಟ್ಟು ಹಿಡಿದ ರೈತ ಮಹಿಳೆಯರು: ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ಬಹಳ ಹೊತ್ತು ಕಾದೂ ಕುಳಿತಿದ್ದ ರೈತರ ಮನವೊಲಿಸಲು ಪೊಲೀಸ್ ಇಲಾಖೆ ಸಿಬ್ಬಂದಿ ಪ್ರಯತ್ನಿಸಿದಾಗ ಕೆಲ ರೈತ ಮಹಿಳೆಯರು ನಾವು ಇಲ್ಲಿಂದ ಹೋಗುವುದಿಲ್ಲ ನಾವು ಇಲ್ಲಿಂದ ಹೊರ ಹೋದ ಮೇಲೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಬಿತ್ತನೇ ಬೀಜ ಕೊಡುತ್ತಾರೆ ಎಂಬ ಅನುಮಾನ ಇದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೇಲೆ ರೈತ ಮಹಿಳೆಯರ ಆರೋಪ ಮಾಡಿದರು…..ಬಿತ್ತನೆ ಬೀಜಕ್ಕಾಗಿ ಸಾಲ ಮಾಡಿ ಮುಂಗಡ ಹಣ ಕಟ್ಟೀದ್ದೇವೆ ಬಿತ್ತನೆ ಮಾಡಲು ಈಗಾಗಲೇ ಸಾಕಷ್ಟು ಸಿದ್ಧತೆ ಸಹ ಮಾಡಿಕೊಂಡಿದ್ದೇವೆ ಈಗ ಏಕಾಏಕಿ ಬಿತ್ತನೆ ಮಾಡಲು ಬೀಜ ಇಲ್ಲ ಎಂದು ಆಧಿಕಾರಿಗಳು ಹೇಳಿದರೆ ನಮ್ಮ ಪರಿಸ್ಥಿತಿ ಏನಾಗಬೇಕು ಒಂದು ವಾರದಲ್ಲಿ ಬಿತ್ತನೆ ಮಾಡಲಿಲ್ಲ ಎಂದರೆ ಮುಂದೇ ನಮ್ಮ ಪರಿಸ್ಥಿತಿ ಧಾರುವಾಗಲಿದೆ ಎಂದು ರೈತ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು…..
ಈ ಕುರಿತು ಪ್ರತಿಕ್ರಿಯೆ ಗಾಗಿ ತೋಟಗಾರಿಕೆ ಇಲಾಖೆ ಜೆಡಿಗಳಾದ ಶರಣಪ್ಪ ಭೋಗಿ ಕರೆ ಮಾಡಿದಾಗ ಅವರು ಕರೆ ಸ್ವೀಕಲಿಸಲಿಲ್ಲ…..
ಹೆಚ್ಛಿನ ಭದ್ರತೆ
ರೈತರನ್ನು ನಿಯಂತ್ರಿಸಲಾಗದೆ ಪೊಲೀಸರು ಸೋಮವಾರ ಲಘು ಲಾಠಿ ಪ್ರಹಾರ ನಡೆಸಿದ ಹಿನ್ನೆಲೆ
ಮಂಗಳವಾರ ಸಹ ನೂರಾರು ರೈತರು ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ಹೆಚ್ಚಿನ ರೈತರು ಸೇರಿದ್ದರಿಂದ ಹೆಚ್ಛಿನ ಮುಂಜಾಗ್ರತೆ ವಹಿಸಿ ಪೊಲೀಸ್ ಭದ್ರತೆಯನ್ನು ಹೆಚ್ಛಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು.….