ರಾಘವಂಕ ಮಠದ ಹಿರಿಯ ಗುರುಗಳ ಮತ್ತು ಭಕ್ತರ ಅಪೇಕ್ಷೆಯಂತೆ ಉತ್ತರಾಧಿಕಾರಿ ನೇಮಕ

0
505

ಮಠದ ಹಿರಿಯ ಗುರುಗಳ ಮತ್ತು ಮಠದ ಭಕ್ತರ ಅಪೇಕ್ಷೆಯಂತೆ ರಾಘವಂಕ ಮಠದ ಉತ್ತರಾಧಿಕಾರಿ ನೇಮಕ….. ನ್ಯಾಯಲಯ ಆದೇಶಕ್ಕೆ ನಾವು ಸಹ ಬದ್ಧ

ಬಳ್ಳಾರಿ: ಕುರುಗೋಡಿನ ರಾಘವಂಕ ಮಠಕ್ಕೆ ರಾತ್ರೋ ರಾತ್ರಿ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಮಠದ ಹಿರಿಯ ಗುರುಗಳ ಮತ್ತು ಮಠದ ಭಕ್ತರ ಅಪೇಕ್ಷೆಯಂತೆ ರಾಘವಂಕ ಮಠದ ಉತ್ತರಾಧಿಕಾರಿಯಾಗಿ ನನ್ನನ್ನು ಬ್ರಾಹ್ಮಿ ಮೂಹರ್ತ ದಲ್ಲಿ ಪಟ್ಟಾಭಿಷೇಕ ಮಾಡಲಾಗಿದೆ ಎಂದು ಸೂಗುರೇಶ್ವರ ಮಠದ ಶಿವಾಚಾರ್ಯ ಮಹಾಸ್ವಾಮಿಗಳು ಪ್ರತಿಪಾಧಿಸಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಮಾತನಾಡಿದ ಅವರು ಬಾಹ್ಮಿ ಮೂಹರ್ತದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳ ಮೂಲಕ ರಾಘವಂಕ ಮಠದ ಹಿರಿಯ ಗುರುಗಳ ಅಪೇಕ್ಷೆಯಂತೆ ಜಗದ್ಗುರುಗಳ ಆದೇಶದ ಮೇರೆಗೆ ಭಕ್ತರ ಇಚ್ಛೆ ಅನುಸಾರವಾಗಿ ನನ್ನನ್ನು ರಾಘವಂಕ ಮಠದ ಪಟ್ಟಾಧಿಕಾರಿಯನ್ನು ನೇಮಿಸಿದ್ದಾರೆ.

ನ್ಯಾಯಲಯ ಆದೇಶಕ್ಕೆ ನಾವು ಸಹ ಬದ್ಧ: ರಾಘವಂಕ ಮಠದ ಹಿರಿಯ ಗುರುಗಳ ಅಪೇಕ್ಷೆಯಂತೆ ಜಗದ್ಗುರುಗಳು ಆದೇಶ ಮತ್ತು ಟ್ರಸ್ಟಿನ ಸದಸ್ಯರ ಹಾಗೂ ಮಠದ ಭಕ್ತರ ಇಚ್ಛೆಯಂತೆ ಮಠದ ಧಾರ್ಮಿಕ ವಿಧಿ ವಿಧಾನಗಳನ್ನು ಹಾಗೂ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ನನ್ನನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಒಂದು ವೇಳೆ ನ್ಯಾಯಲಯದ ಆದೇಶ ನಮ್ಮ ವಿರುದ್ಧ ಬಂದರೆ ಅದಕ್ಕೆ ತಲೆಬಾಗುವೆ ಎಂದರು.

ಇಂಚಗೇರಿ ಮಠದ ಉತ್ತರಾಧಿಕಾರಿಯಾಗಿ ಶಂಭುಲಿಂಗ ಶಿವಾಚಾರ್ಯ ನೇಮಕ: ಇಂಚಗೇರಿ ಮಠದ ಉತ್ತರಾಧಿಕಾರಿಯಾಗಿ ಶಂಭುಲಿಂಗ ಶಿವಾಚಾರ್ಯ ಅವರು ನೇಮಕವಾಗಿದ್ದಾರೆ ಈ ಕುರಿತು ಯಾರ ಗಮನಕ್ಕೂ ತರಲಾಗಿಲ್ಲ ಆದ್ದರಿಂದ ರಾಘವಂಕ ಮಠದ ಹಿರಿಯ ಗುರುಗಳ ಅಪೇಕ್ಷೆಯಂತೆ ಜಗದ್ಗುರಗಳು ಕುರುಗೋಡಿನ ರಾಘವಂಕ ಮಠದ ಉತ್ತರಾಧಿಕಾರಿಯಾಗಿ ನನ್ನನ್ನು ನೇಮಕ ಮಾಡಿದ್ದಾರೆ ಎಂದರು.

ಟ್ರಸ್ಟಿನ ಕಾರ್ಯದರ್ಶಿಗಳಾದ ಎಸ್.ಎಂ ಶಿವ ರುದ್ರಯ್ಯ ಮಾತನಾಡಿ ಮಠದ ಧಾರ್ಮಿಕ ಕಾರ್ಯಕಲಾಪಗಳು ನಡೆಯುವುದು ನಿಲ್ಲಬಾರದು ಎಂಬ ಉಧ್ಧೇಶದಿಂದ ಉತ್ತರಾಧಿಕಾರಿ ನೇಮಿಸಲಾಗಿದೆ ಕೋರ್ಟ್ ಆದೇಶ ನಮ್ಮ ವಿರುದ್ಧ ಬಂದರೆ ಅದಕ್ಕೆ ನಾವು ಬದ್ಧ ಎಂದರು.

ಈ ಸಂದರ್ಭದಲ್ಲಿ ರಾಘವಂಕ ಮಠದ ಸೇವಾ ಟ್ರಸ್ಟಿನ ಮುಖ್ಯಸ್ಥರಾದ ರುದ್ರಮುನಿ ಸ್ವಾಮಿ, ಉಮಾಪತಿ ಗೌಡ, ಪಾಲಕ್ಷ ಗೌಡ , ಸುರೇಶ್ ಗೌಡ, ಚಂದ್ರಶೇಖರಯ್ಯ ಸ್ವಾಮಿ, ಮಂಜುನಾಥಯ್ಯ ಸ್ವಾಮಿ, ಸೇರಿದಂತೆ ಇತರರು ಇದ್ದರು.

Previous articleಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ.
Next articleಕೊವೀಡ್ ಮಾರ್ಗಸೂಚಿ ಪಾಲಿಸಿ, ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಚರಿಸಿ : ಪಿಎಸ್ಐ. ಹನುಮಂತಪ್ಪ ಕರೆ

LEAVE A REPLY

Please enter your comment!
Please enter your name here