ಬಳ್ಳಾರಿ: ಮಠದ ಆಸ್ತಿ ಕಬಳಿಸುವ ದುರುದ್ದೇಶದಿಂದ ಶ್ರೀ ಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮತ್ತು ಉಜ್ಜೈನಿ ಜಗದ್ಗುರುಗಳಾದ 1008 ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಇತರರು ಸೇರಿ ಕಾನೂನು ಭಾಹಿರವಾಗಿ ಕುರುಗೋಡಿನ ರಾಘವಂಕ ಮಠಕ್ಕೆ ಇದೇ ತಿಂಗಳು ಜು.4ರಂದು ರಾತ್ರೋ ರಾತ್ರಿ ಸೂಗೂರೇಶ್ವರ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವ ಮೂಲಕ ನನಗೆ ಮತ್ತು ಮಠಕ್ಕೆ ವಂಚನೆ ಮಾಡಿದ್ದಾರೆ ಎಂದು ಕುರುಗೋಡಿನ ರಾಘವಂಕ ಮಠದ ರಾಘವಂಕ ಮಲ್ಲಿ ಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಆಸ್ತಿ ಕಬಳಿಸುವ ದುರುದ್ದೇಶದಿಂದ ಸುಳ್ಳು ದಾಖಲೆಗಳನ್ನು ಸೃಷ್ಠಿಮಾಡಿ ಅಕ್ರಮವೆಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ಕುರುಗೋಡಿನ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ರಾಘವಂಕ ಮಲ್ಲಿ ಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅಧಿಕೃತವಾಗಿ ನಾನೇ ಪಟ್ಟಾಧಿಕಾರಿ ….?
ಶ್ರಿ ಶೈಲ ಮತ್ತು ಉಜ್ಜೈನಿ ಜಗದ್ಗುರುಗಳು ನನ್ನನ್ನು 2009ರಲ್ಲಿ ಕರುಗೋಡಿನ ಶ್ರೀ ಗುರು ರಾಘವಂಕ ಸ್ವಾಮಿಗಳ ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದರು ಇದಕ್ಕೆ ಈ ಹಿಂದಿನ ಪಟ್ಟಾಧಿಕಾರಿಗಳಾದ ರಾಘವಂಕ ಪಂಡಿತಾರಾಧ್ಯ ಶಿವಾರ್ಚಾರ್ಯ ಸ್ವಾಮಿಗಳ ಅಮೃತ ಹಸ್ತದಿಂದ ಸದರಿ ಮಠಕ್ಕೆ ನನ್ನನ್ನು ಪಟ್ಟಾಧಿಕಾರಿಯನ್ನಾಗಿ ನೇಮಿಸಿದ ಸಂಪುಟ ಬರೆದಿದ್ದಾರೆ ಅದಕ್ಕೆ ವಿವಿಧ ಮಠಾಧೀಶರು ಸಾಕ್ಷಿಯಾಗಿರುತ್ತಾರೆ. ಅಂದಿನಿಂದ ಇಂದಿನವರೆಗೂ ಪಟ್ಟಾಧಿಕಾರಿಯಾಗಿ ಗುರುಗಳ ಮಾರ್ಗದರ್ಶನದಲ್ಲಿ ಮುಂದುವರೆದು ಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ಸರಾಗವಾಗಿ ಮುಂದುವರೆಸಿಕೊಂಡು ಬಂದಿರುತ್ತೇನೆ. 2021 ಮೇ.14ರಂದು ಕರೋನಾ ಕಾಯಿಲೆಯಿಂದ ನಮ್ಮ ಗುರುಗಳು ಲಿಂಗೈಕ್ಯ ರಾಗಿದ್ದು ಮಠದ ಆಸ್ತಿ ಪಾಸ್ತಿ ಮತ್ತು ಎಲ್ಲಾ ಧಾರ್ಮಿಕ ಕಾರ್ಯಗಳಿಗೆ 2009ರಿಂದ ಇಲ್ಲಿಯವರೆಗೂ ಅಧಿಕೃತವಾಗಿ ನಾನೇ ಪಟ್ಟಾಧಿಕಾರಿಯಾಗಿದ್ದು ನನ್ನನ್ನು ಹೊರೆತು ಪಡೆಸಿದರೆ ಬೇರೆ ಯಾರಾಗೂ ಆ ಮಠದ ಮೇಲೆ ಯಾವುದೇ ವಿಧವಾದ ಹಕ್ಕು ಮತ್ತು ಅಧಿಕಾರ ಇರುವುದಿಲ್ಲ ಎಂದು ಪ್ರತಿಪಾಧಿಸಿದರು
ಏನಿದು ವಿವಾದ…? ದಾವೆ ಇನ್ನೂ ಚಾಲ್ತಿಯಲ್ಲಿರುತ್ತದೆ…!
ಈ ಹಿಂದಿನ ಕುರುಗೋಡಿನ ರಾಘವಂಕ ಮಠದ ಪಟ್ಟಾಧಿಕಾರಿಗಳಾದ ರಾಘವಂಕ ಪಂಡಿತಾರಾಧ್ಯ ಶಿವಾರ್ಚಾರ್ಯ ಸ್ವಾಮಿಗಳು ನನ್ನೊಂದಿಗೆ ಅಭಿಪ್ರಾಯ ಭೇದದಿಂದ ಬಳ್ಳಾರಿಯ 5ನೇ ಹೆಚ್ಚುವರಿ ಸಿವಿಲ್ ನ್ಯಾಯಲಯ ಕಿರಿಯ ಶ್ರೇಣಿಯಲ್ಲಿ ಒ.ಎಸ್.ನಂ:979/2012 ಅಂತ ದಾವೆ ಹಾಕಿ ನನ್ನ ಪಟ್ಟಾಧಿಕಾರ ಮತ್ತು ಸಂಪುಟ ರದ್ಧ ಮಾಡಬೇಕೆಂದು ಕೋರಿ ನ್ಯಾಯಲಯಕ್ಕೆ ಧಾವೆ ಹಾಕಿದ್ದು ಸದರಿ ದಾವೆ ಇನ್ನೂ ಚಾಲ್ತಿಯಲ್ಲಿರುತ್ತದೆ. ಇಲ್ಲಿಯವರೆಗೂ ನನ್ನನ್ನು ನ್ಯಾಯಾಲಯ ನನ್ನನ್ನು ಪಟ್ಟಾಧಿಕಾರಿ ಅಲ್ಲವೆಂದು ಯಾವುದೇ ನಿರ್ಣಯ ತೆಡೆದುಕೊಂಡಿರುವುದಿಲ್ಲ ಎಂದು ಪ್ರತಿಪಾಧಿಸಿದರು.
ಏನಾಯ್ತು….? ದುರುದ್ದೇಶದಿಂದ ಉತ್ತಾರಾಧಿಕಾರಿಯನ್ನು ನೇಮಕ…!
ಮಠದ ಆಸ್ತಿಯನ್ನು ಕಬಳಿಸುವ ಸತತ ಪ್ರಯತ್ನ ಮಾಡುತ್ತಿದ್ದ ಕುರುಗೋಡು ನಿವಾಸಿಗಳಾದ ಎಸ್.ಶಿವರುದ್ರಯ್ಯ ತಂದೆ ಬಸಯ್ಯ, ರುದ್ರಮುನಿ ತಂದೆ ಬಸಲಿಂಗಯ್ಯ, ಬಿ.ಎಂ. ಎರ್ರಿಸ್ವಾಮಿ ತಂದೆ ಕುಮಾರಸ್ವಾಮಿ, ಇವರುಗಳು ಶ್ರೀ ಶೇಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಮತ್ತು ಉಜ್ಜೈನಿ ಜಗದ್ಗುರುಗಳಾದ1008 ಸಿಧ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ಶಾಮೀಲಾಗಿ ನನ್ನ ಅನುಪಸ್ಥಿತಿಯಲ್ಲಿ ಮಠದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ 2021 ಜು.4ರಂದು ರಾತ್ರೋರಾತ್ರಿ ಅವರಿಗೆ ಯಾವುದೇ ಹಕ್ಕು ಅಧಿಕಾರ ಇಲ್ಲದಿದ್ದರು ಇತರೆ ಮಠಗಳ ಸ್ವಾಮಿಗಳೊಂದಿಗೆ ಸೇರಿ ಸೂಗೂರೇಶ್ವರ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ನೇಮಕ ಮಾಡುವ ಮೂಲಕ ನನಗೆ ಮತ್ತು ಮಠಕ್ಕೆ ವಂಚನೆ ಮಾಡಲು ಮತ್ತು ಆ ಮೂಲಕ ಮಠದ ಆಸ್ತಿ ಕಬಳಿಸುವ ದುರುದ್ದೇಶದಿಂದ ಉತ್ತಾರಾಧಿಕಾರಿಯನ್ನು ನೇಮಕ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಟ್ಟುರು ಹಿರೇಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಇತರರು ಇದ್ದರು