ಬೆಂಗಳೂರು : ರಾಜ್ಯ ಸರ್ಕಾರ ಬೇಡಿಕೆ ಈಡೇರಿಸೋ ಬದಲು, ನೌಕರರ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದೆ. ವರ್ಗಾವಣೆ, ವಜಾದಂತ ಕ್ರಮ ಕೈಗೊಳ್ಳುವ ಮೂಲಕ, ನೌಕರರ ಮುಷ್ಕರ ಹತ್ತಿಕ್ಕುವ ಕೆಲಸಕ್ಕೆ ಪ್ರಯತ್ನಿಸುತ್ತಿದೆ. ಆದ್ರೇ.. ನಮ್ಮ ಮುಷ್ಕರ ಬೇಡಿಕೆ ಈಡೇರಿಸೋವರೆಗೆ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಬೇಡಿಕೆ ಈಡೇರಿಸದ ಹೊರತು ಮುಷ್ಕರವನ್ನು ಕೈಬಿಡೋದಿಲ್ಲ ಎಂಬುದಾಗಿ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ತಿಳಿಸಿದ್ದಾರೆ.