ಬಳ್ಳಾರಿ: ಸಿಎಂ ಯಡಿಯೂರಪ್ಪನವರ ರಾಜೀನಾಮೆ ವಿಚಾರವಾಗಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮ ದವರ ವಿರುದ್ಧವೇ ಗರಂ ಆದರು.
ಜಿಲ್ಲಾ ಕ್ರೀಡಾಂಗಣದಲ್ಲಿಂದು ಕಸ ವಿಲೇವಾರಿ ವಾಹನಗಳಿಗೆ ಚಾಲನೆ ನೀಡಿದರು. ಬಳಿಕ ಸಿಎಂ ರಾಜೀನಾಮೆ ವಿಚಾರವಾಗಿ ಮಾಧ್ಯಮ ದವರು ಕೇಳಿದ ಪ್ರಶ್ನೆಯೊಂದಕ್ಕೆ ಗರಂ ಆದ ಅವರು, ಬಿಡಪ್ಪ ಅದನ್ನ ಏನ್ ಕೇಳುತ್ತೀಯಾ ಅಂತ ಪ್ರತಿಕ್ರಿಯಿಸದೇ ಹೊರಟು ಹೋದರು.
ನೀವು ಅದನ್ನೇ ಕೇಳ್ತಿರಾ ಅಂತಾನೆ ನಾನು ಇಲಾಖೆ ವಿಚಾರವಷ್ಟೇ ಪ್ರಸ್ತಾಪಿಸಿದ್ದೆ. ಆದರೆ, ನೀವು ಮತ್ತದೇ ಕೇಳುತ್ತಿದ್ದೀರಿ. ಪದೇ ಪದೇ ಅದನ್ನೇ ರಿಪೀಟ್ ಮಾಡ್ತೀರಿ. ನಾನಂತೂ ಆ ಕುರಿತು ಪ್ರತಿಕ್ರಿಯಿಸಲಾರೆ. ಸಿಎಂ ಬಿಎಸ್ವೈ ಅವರ ರಾಜೀನಾಮೆ ವಿಚಾರ ಮುಗಿದು ಹೋದ ಕಥೆ ಎಂದರು.