ಬೆಳಗಾಯಿತು ವಾರ್ತೆ
ಹಡಗಲಿ: ಕಾರ್ತಿಕ ಮಾಸದ ಪ್ರಯುಕ್ತ ಪಟ್ಟಣದ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯಲ್ಲಿ ಕಾರ್ತಿಕೋತ್ಸವದ ಅಂಗವಾಗಿ ನಡೆದ ಜಂಗಮೋತ್ಸವ ಕಾರ್ಯಕ್ರಮದಲ್ಲಿ ಹೂವಿನ ಹಡಗಲಿಯ ಕೃಷಿ ಇಲಾಖೆಯಿಂದ ಕೃಷಿ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಆಯೋಜನೆ ಮಾಡಲಾಯಿತು.
ಕೃಷಿ ಮೇಳ ಪ್ರದರ್ಶನಕ್ಕೆ ಹೀರೆ ಸಿಂಧೋಗಿಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಚಾಲನೆ ನೀಡಿದರು. ಶ್ರೀಮಠದ ಚನ್ನವೀರ ಮಹಾಸ್ವಾಮಿಗಳು ಹಾಗೂ ನಿರಂಜನ್ ಸ್ವಾಮಿಗಳು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ನಮ್ಮ ಹಿಂದಿನ ಬೆಸಾಯ ಪದ್ದತ್ತಿಯನ್ನು ಅನುಸರಿಸಿ ಉತ್ತಮ ರೀತಿಯ ಬೆಳೆಗಳನ್ನು ಬೆಳೆಯಲು ರೈತರಿಗೆ ಕರೆ ನೀಡಿದರು.
ಕೃಷಿವಸ್ತು ಪ್ರದರ್ಶನದಲ್ಲಿ ರೈತರು ಕೃಷಿ ಮಾಡಲು ಬಳಸಿದಂತ ಹಳೆ ಕಾ¯ದ ನೇಗಿಲು, ಕೂರಿಗೆ ಸೇರಿದಂತೆ ಇತರೆ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ರೈತರ ಗಮನ ಸೆಳೆದವು.
ಸಿರಿಧಾನ್ಯ ಮೇಳದಲ್ಲಿ ಜೋಳ, ನವಣೆ, ಸಜ್ಜೆ, ಹಾರಕ, ಗೋಧಿ ಸೇರಿಂತೆ ವಿವಿಧ ಕಾಳುಗಳಿಂದ ಬಿಡಿಸಲಾಗಿದ್ದ ಚಿತ್ರ ಜನರನ್ನ ಆಕರ್ಷಿಸಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಮೊಹಮ್ಮದ್ ಅಶ್ರಪ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಹನುಮಂತ ನಾಯ್ಕ್, ಕೃಷಿ ಅಧಿಕಾರಿ ಬಿ. ವೆಂಕಟೇಶ್ನಾಯ್ಕ್, ರವಿ ಕುಮಾರ್ ಹಾವನೂರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.