ಬೆಳಗಾಯಿತು ವಾರ್ತೆ
ಕೊಟ್ಟೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಇತಿಹಾಸ ಹೊಂದಿರುವ ವೀರಶೈವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕೊಟ್ಟೂರೇಶ್ವರ ಕಾಲೇಜಿನಲ್ಲಿನ ಕೌಶಲ್ಯ ಆಧಾರಿತ ಶಿಕ್ಷಣವು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ. ಎಂದು ಕಾಲೇಜಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾದ ಸಿದ್ದರಾಮಯ್ಯ ಕಲ್ಮಠ ಹೇಳಿದರು.
ಗುರುವಾರ ಕಾಲೇಜಿನ ಡಾ.ಹೆಚ್.ಜಿ.ರಾಜ್ ಸಭಾಭವನದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಹೆಸರಿನಲ್ಲಿರುವ ಈ ಸಂಸ್ಥೆಯನ್ನು ರಾಜ್ಯ ಮಟ್ಟದ ಶಿಕ್ಷಣ ಸಂಸ್ಥೆಗಳಂತೆ ಉತ್ತುಂಗದ ಶಿಖರಕ್ಕೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ನಂತರ ಕಾಲೇಜಿನ ನಿಕಟಪೂರ್ವ ಅಧ್ಯಕ್ಷರಾದ ಪಿ ಚನ್ನಬಸವನಗೌಡ ಮಾತನಾಡಿ ಈ ಶಿಕ್ಷಣ ಸಂಸ್ಥೆಗೆ 53 ವರ್ಷಗಳನ್ನು ಪೂರೈಸಿದೆ ನನ್ನ ಅಧಿಕಾರ ಅವಧಿಯಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಕೊರೋನ ಕರಿನೆರಳು ಆವರಿಸಿತ್ತು ಈಗ ನೂತನ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಕಲ್ಮಠ ಅವರು ಸಿಬ್ಬಂದಿ ವರ್ಗ ದೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಮ್ಮ ಕರ್ತವ್ಯವನ್ನು ನಿಭಾಯಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಬಿ.ಆರ್ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಕ್ಕಿ ಶಿವಕುಮಾರ್, ವಿ.ವಿ. ಸಂಘದ ನಿರ್ದೇಶಕ ಹೆಚ್.ಎಂ. ಕಿರಣ್ ಕುಮಾರ್,ರಾಜಶೇಖರ, ಹಿರಿಯ ವಕೀಲರಾದ
ಎಂಎಂಜೆ ಸ್ವರೂಪನಂದ, ಪ್ರಾಚಾರ್ಯ ರವೀಂದ್ರ ಗೌಡ, ನಾಗನಗೌಡ, ಅವಂತಿ ಬಸವರಾಜ್, ಪ್ರಶಾಂತ್, ಗುರುಪ್ರಸಾದ್,ಎನ್.ಸಿ.ಸಿ.ಅಧಿಕಾರಿ ಸಿ.ಬಸವರಾಜ್,ಬೂದಿ ನಾಗರಾಜ್,ಶಿವಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.