ಬೆಳಗಾಯಿತು ವಾರ್ತೆ
ಕೊಟ್ಟೂರು: ಮೌಢ್ಯತೆ, ಅನಿಷ್ಟ ಪದ್ಧತಿಗಳಿಂದ ಜಾಗೃತರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಗ್ರಾಮೀಣ ಭಾಗದ ಜನರು ಮುಖ್ಯ ವಾಹಿನಿ ಬಂದಾಗ ಮಾತ್ರ ಪ್ರಜ್ಞಾವಂತರ ಸಂಖ್ಯೆ ಹೆಚ್ಚಾಗುತ್ತದೆ ಎಂದು. ಸ್ನೇಹ ಸಂಸ್ಥೆಯ ನಿರ್ದೇಶಕ ಟಿ.ರಾಮಾಂಜನೇಯ ಹೇಳಿದರು.
ತಾಲೂಕಿನ ಉಜ್ಜಿನಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸ್ನೇಹ ಸಂಸ್ಥೆಯ ಥಾಟ್ವರ್ಕ್ಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಯೋಜನೆಯ ಸಹಕಾರದೊಂದಿಗೆ ಲಾಕ್ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿರು ಬಡ ಕುಟುಂಬಗಳಿಗೆ ಹಾಗೂ ದೇವದಾಸಿ ಮಹಿಳೆಯರ ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾಭ್ಯಾಸ ಎನ್ನುವುದು ಜೀವನದ ಸಂಪತ್ತನ್ನು ಹೆಚ್ಚಿಸುವ ಸಾಧನವಾಗಿದೆ ಎಂದು ತಿಳಿಸಿದರು.
ಈ ನಮ್ಮ ಸ್ನೇಹ ಸಂಸ್ಥೆ ವತಿಯಿಂದ ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನ ಗ್ರಾಮದಲ್ಲಿನ ನಿಜವಾದ ಬಡವರಿಗೆ ನಮ್ಮ ಸಂಸ್ಥೆಯ ಮೂಲಕ ಒಟ್ಟು 500 ಕಿಟ್ ಗಳನ್ನು ವಿತರಿಸಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪನಿರ್ದೇಶಕರಾದ ಪಿ.ಕೆ ಜಯ ಆಶಾ ಕಾರ್ಯಕರ್ತೆ ಹುಲಿಗೆಮ್ಮ ಸಂಸ್ಥೆ ಸಿಬ್ಬಂದಿಗಳಾದ ಸರೋಜಾ ಎಚ್ ಗೀತಾ ನೇತ್ರಾವತಿ ಅಸ್ಸಾಂ ಭಾಷಾ ಹುಸೇನಪ್ಪ ಮುಂತಾದವರು ಉಪಸ್ಥಿತರಿದ್ದರು.