22 ಕೆರೆಗಳ ನೀರು ತುಂಬಿಸುವ ಯೋಜನೆಗೆ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ
ಕೊಟ್ಟೂರು: ಪಟ್ಟಣದಲ್ಲಿ ನಡೆಯುತ್ತಿರುವ ನಿರಂತರ ಕುಡಿಯುವ ನೀರು ಯೋಜನೆಯ (24×7) ಕಾಮಗಾರಿ ಕೆಲಸದಿಂದ ಇತರ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುತ್ತಿದ್ದು ಗುತ್ತಿಗೆ ಪಡೆದಿರುವ 24×7 ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಹಗರಿಬೊಮ್ಮನ ಕ್ಷೇತ್ರದ ಶಾಸಕ ಭೀಮಾ ನಾಯಕ್ ಹೇಳಿದರು.
ಸೋಮವಾರ ತಾಲೂಕಿನ ಕಂದಗಲ್ಲು ಮತ್ತು ರಾಂಪುರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಗೆ ಚಾಲನೆ ನೀಡಿ ಮಾತನಾಡಿದ ಅವರು 18 ತಿಂಗಳ ಒಳಗೆ ನಡೆಯಬೇಕಿದ್ದ ಕಾಮಗಾರಿ ಕೆಲಸ 40 ತಿಂಗಳಾದರೂ ವಿಳಂಬವಾಗುತ್ತಿದೆ ಇದರಿಂದ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ನಿಂದ ಕೂಡ್ಲಿಗಿ ರಸ್ತೆ ಅಂಬೇಡ್ಕರ್ ನಗರದವರಿಗೆ 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕೆಲಸ ನಿಂತಿರುವುದಕ್ಕೆ ಮೂಲ ಕಾರಣವಾಗಿದೆ ಎಂದು ತಿಳಿಸಿದರು.
ಕಳೆದ 25 ವರ್ಷದಿಂದ ಹಗರಿಬೊಮ್ಮಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಭಾಗದ ಹದಗೆಟ್ಟು ಹೋಗಿದ್ದು ಹೊಸ ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಸಡಕ್ ಯೋಜನೆ ಅಡಿಯಲ್ಲಿ 20 ಕೋಟಿ ರೂ ಅಧಿಕ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಗೆ ನಡೆಯಲಿವೆ ಎಂದು ಹೇಳಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಕ್ಕಿಂತ ಮುಂಚಿತವಾಗಿ ಅಂದಿನ ಸಮ್ಮಿಶ್ರ ಸರ್ಕಾರವು ನೂರು ಕೋಟಿ ಅನುದಾನವನ್ನು ಕೊಟ್ಟೂರು ಕೆರೆ ಸೇರಿದಂತೆ ಕ್ಷೇತ್ರದ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ದೊರೆತು ಡಿಪಿಆರ್ ಆದನಂತರ 379 ಕೋಟಿ ರೂ ವೆಚ್ಚದಲ್ಲಿ ನಡೆಯಬೇಕಿದ್ದ ಕಾಮಗಾರಿಯನ್ನು ಬಿಜೆಪಿ ಸರ್ಕಾರ ತಡೆಯುವುದು ಈ ಕ್ಷೇತ್ರದ ಜನರಿಗೆ ಮಲತಾಯಿ ಧೋರಣೆ ತೋರಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಉಜಿನಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಂ ಜೆ ಹರ್ಷವರ್ಧನ್ ತಹಸಿಲ್ದಾರ್ ಜಿ ಅನಿಲ್ ಕುಮಾರ್ ತಾಲೂಕು ಪಂಚಾಯಿತಿ ಇ.ಒ ತಿಮ್ಮಣ್ಣ ಹುಲ್ಲುಮನಿ ಮತ್ತು ಮುಖಂಡರಾದ ಪಾವಡಿ ಹನುಮಂತಪ್ಪ, ಸುಧಾಕರ್ ಪಾಟೀಲ್ ಗೌಡ, ಎಸ್. ರಾಜೇಂದ್ರ ಪ್ರಸಾದ್, ಬೂದಿ ಶಿವಕುಮಾರ್, ದ್ವಾರಕೇಶ್, ಅನಿಲ್ ಕುಮಾರ್ ಹೊಸ್ಮನಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಟಿ ಜಗದೀಶ ತೋಟದ ರಾಮಣ್ಣ ಹಾಗೂ ರಾಂಪುರ ಭರಮಣ್ಣ, ತಿಮ್ಮಲಾಪುರ ಕೊಟ್ರೇಶ, ಚಿರಿಬಿ ಹನುಮಂತಪ್ಪ, ಕೆ.ಪಕ್ಕಿರಪ್ಪ, ಸಧ್ದಮ್,ಆಕಾಶ, ಮುಂತಾದವರು ಇದ್ದರು.