ಬೆಳಗಾಯಿತು ವಾರ್ತೆ
ಕೊಟ್ಟೂರು :ವಿಶಿಷ್ಟಾಚರಣೆಯ ಇಲ್ಲಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವವು ಬೌದ್ದಪೊರ್ಣಿಮೆಯ ದಿನವಾದ ಶುಕ್ರವಾರ ಇಳಿ ಸಂಜೆ ೫.೪೫ರ ಸುಮಾರಿನಲ್ಲಿ ಸಾವಿರಾರು ಭಕ್ತರ ಸಡಗರ ಸಂಭ್ರಮಗಳೊAದಿಗೆ ಜರುಗಿತು.ರಥಕ್ಕೆ ಚಾಲನೆ ದೊರಕುತಿದ್ದಂತೆ ದುರುಗಮ್ಮ ದೇವಿಗೆ ಹರಕೆ ಹೊತ್ತ ಕೆಲ ಭಕ್ತರು ಜೀವಂತ ೫-೬ ಕ್ಕೂ ಹೆಚ್ಚು ಕೋಳಿಗಳನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು.
ದೇವಿಯ ರಥೋತ್ಸವಕ್ಕೂ ಮುಂಚೆ ಗುಡುಗು ಸಮೇತ ಮಳೆ ಬರತೊಡಗಿದ್ದರಿಂದ ಭಕ್ತರಿಗೆ ಆತಂಕ ಶುರುವಾಗಿತ್ತು. ಸ್ವಲ್ಪ ಸಮಯದಲ್ಲಿ ಮಳೆ ನಿಂತಿತು. ನಂತರ ಭಕ್ತರು ಬಿಕ್ಕಿಮರಡಿ ದುರುಗಮ್ಮ ದೇವಿಯ ದೇವಸ್ಥಾನದ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸತೊಡಗಿದರು. ನಂತರ ರಥೋತ್ಸವ ಜರುಗುವ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊAಡವು.
ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ಏಕೈಕ ಸಂಪ್ರದಾಯ ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವದ್ದಾಗಿದ್ದು ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ದಂಡು ದಂಡಾಗಿ ಮಧ್ಯಾಹ್ನದಿಂದಲೇ ಇಲ್ಲಿನ ಕೆರೆಯ ದಂಡೆಯ ಮೇಲಿರುವ ದೇವಿಯ ಗುಡಿಯ ಬಳಿ ಜಮಾಯಿಸತೊಡಗಿದರು. ಈ ಪೈಕಿ ಹೊಸದಾಗಿ ಮದುವೆಯಾದ ದಂಪತಿಗಳ ಸಂಖ್ಯೆ ಹೆಚ್ಚಕ್ಕಿತ್ತು.
ರಥೋತ್ಸವಕ್ಕೂ ಮೊದಲು ಗುಡಿಯಿಂದ ದುರುಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೋಂದಿಗೆ ರಥದ ಬಳಿ ತರಲಾಯಿತು.ರಥದ ಸುತ್ತಲೂ ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ಪ್ರದಕ್ಷಿಣೆ ನಡೆಯಿತು.ನಂತರ ದೇವಿಯನ್ನು ಪಲ್ಲಕ್ಕಿಯಿಂದ ರಥದಲ್ಲಿ ಕೂರಿಸಲಾಯಿತು.ನಂತರ ದೇವಿಯ ಬಾವುಟವನ್ನು ಹರಾಜು ಕೂಗು ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆ ಮುಗಿಯುತ್ತಿಂದತೆಯೇ. ಭಕ್ತರು ಜೀವಂತ ಕೋಳಿಗಳನ್ನು ತೂರಿದರು. ಕೋಳಿಗಳನ್ನು ತೊರುತ್ತಿದ್ದಂತೆ ರಾಶಿಯೋಪಾದಿಯಲ್ಲಿ ಬಾಳೆಹಣ್ಣುಗಳನ್ನು ಮತ್ತಷ್ಟು ಬಗೆಯ ಭಕ್ತರು ತೂರಿ ಭಕ್ತಿ ಸರ್ಮಪಿಸಿದರು.
ರಥೋತ್ಸವ ಸುಮಾರು ೩೦೦ ಮೀಟರ್ ದೂರವಿರುವ ಆಂಜನೇಯ ದೇವಸ್ಥಾನದ ಬಳಿ ಸಾಗಿ ವಾಪಸ್ ಮರಳಿ ಬಂದು ದುರುಗಮ್ಮ ಗುಡಿಯ ಮುಂಭಾಗದ ಬಳಿ ನಿಲುಗಡೆಗೊಂಡಿತು.
ಹದಿನಾಲ್ಕು ವರ್ಷದಿಂದ ಕೋಳಿ ತೂರುತ್ತಿರುವೆ- ದುರುಗಮ್ಮಗೆ ಹರಕೆ ಹೊತ್ತು ಕೋಳಿಗಳನ್ನು ತೂರುತ್ತಾ ಬಂದಿರುವೆ ನನಗೆ ನನ್ನ ಕುಟುಂಬಕ್ಕೆ ಒಳ್ಳೆಯದಾಗುತ್ತಾ ಬಂದಿದೆ ಮುಂದಿನ ವರ್ಷಗಳಲ್ಲೂ ಇದನ್ನು ಮುಂದುವರಿಸಿಕೊAಡು ಬರುತ್ತೇನೆ.ಕೊಟ್ಟೂರಿನ ವಾಲ್ಮೀಕಿ ಜನಾಂಗದ ಸಿದ್ದಣ್ಣ ತಿಳಿಸಿದರು.
ವರದಿ: ಕೊಟ್ರೇಶ್ ತೆಗ್ಗಿನಕೇರಿ