ಬೆಳಗಾಯಿತು ವಾರ್ತೆ
ಕೊಟ್ಟೂರು: ಇಲ್ಲಿನ ಕೂಡ್ಲಿಗಿ ತಾಲೂಕು ಶ್ರೀ ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮುಂದಿನ 30 ತಿಂಗಳ ಆಡಳಿತಾವಧಿಗೆ (ಪಿ ಎಲ್ ಡಿ ಬ್ಯಾಂಕ್) ನೂತನ ಅಧ್ಯಕ್ಷರಾಗಿ ಹೊಸಳ್ಳಿ ಕ್ಷೇತ್ರದ ಎಚ್ ಬಿ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಪಟ್ಟಣದ ಉಜ್ಜಿನಿ ರಸ್ತೆಯಲ್ಲಿರುವ ಪಿ ಎಲ್ ಡಿ ಬ್ಯಾಂಕಿನಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ನಡೆಯಿತು ಹೊಸಳ್ಳಿ ಕ್ಷೇತ್ರದ ಎಚ್ ಬಿ ಸತೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಜೆ ನಾಗರಾಜ್ ಅವರು ಇವರ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.
ಪಿ ಎಲ್ ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆದ ಎಚ್ಪಿ ಸತೀಶ್ ಅವರಿಗೆ ಉಜ್ಜಿನಿ ಜಿ.ಪಂ. ಸದಸ್ಯ ಎಂ.ಎಂ.ಜೆ ಹರ್ಷವರ್ಧನ್, ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಪಿ.ಹಚ್. ದೊಡ್ಡರಾಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಪ.ಪಂ ಮಾಜಿ ಅಧ್ಯಕ್ಷ ಅನಿಲ್ ಹೊಸಮನಿ, ಐ.ಎಂ ದ್ವಾರಕೇಶ್, ಪಿಎಲ್ಡಿ ಬ್ಯಾಂಕ್ ನ ನಿಕಟಪೂರ್ವ ಅಧ್ಯಕ್ಷ ಪಿ.ಎಚ್ ರಾಘವೇಂದ್ರ, ಬೆನಕನಹಳ್ಳಿ ಸೋಮಣ್ಣ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಸೂರ್ಯಪ್ರಕಾಶ್, ಬುಲ್ ಶ್ರೀನಿವಾಸ್, ದಲಿತ ಮುಖಂಡರಾದ ತೆಗ್ಗಿನಕೆರಿ ಕೊಟ್ರೇಶ್, ಬಣಕಾರ ಹುಲುಗಪ್ಪ, ಸೆರಗಾರ ವೆಂಕಟೇಶ್, ಹೆಚ್. ಪರಶುರಾಮ್, ವಕೀಲರಾದ ಹನುಮಂತಪ್ಪ, ಬಿ.ಶಿವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ, ಸದ್ದಾಮ್ ಮುಂತಾದವರು ಇದ್ದರು.
ಫೋಟೋ ವಿವರ ಗುರುವಾರ ಇಲ್ಲಿನ ಪಿ ಎಲ್ ಡಿ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಹೊಸಳ್ಳಿ ಕ್ಷೇತ್ರದ ಬಿಎಸ್ ಸತೀಶ್ ಅವಿರೋಧ ಆಯ್ಕೆಯಾದರು ಜಿಪಂ ಸದಸ್ಯ ಎಂಎಂಸಿ ಹರ್ಷವರ್ಧನ್ ಹಾಗೂ ಪಿಎಚ್ ದೊಡ್ಡರಾಮಣ್ಣ ಜೊತೆಗಿದ್ದರು.