ಬಳ್ಳಾರಿ: ಯೋಜನಾ ಇಲಾಖೆಯ ಸಚಿವರಾದ ನಾರಾಯಣ ಗೌಡ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿ/ಕ್ರಿಯಾ ಯೋಜನೆ ಕುರಿತು ಜುಲೈ 13ರಂದು ನಡೆಯಲಿರುವ ಪ್ರಗತಿ ಪರಿಶೀಲನೆ ಸಭೆಯನ್ನು ಕೂಡಲೇ ರದ್ಧು ಪಡಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಸಿರಿಗೇರಿ ಪನ್ನರಾಜ್ ಸರ್ಕಾರವನ್ನು ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಭೆ ಅಸಂವಿಧಾನಿಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾನೂನಿಗೆ ಎಂದರು. ವಿರುದ್ಧವಾಗಿದೆ ರಾಜ್ಯ ಪಾಲರಿಂದ ಯಾವುದೇ ಪರವಾನಿಗೆ ಇಲ್ಲದೇ ಸಭೆಯನ್ನು ಕರೆಯಲಾಗಿದೆ ಮಂಡಳಿಗೆ ಸದಸ್ಯರನ್ನು ನೇಮಕ ಮಾಡದ ಮಂಡಳಿಯನ್ನು ಹೈಜಾಕ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬೇಡಿಕೆಗಳು
ಕಲ್ಯಾಣ ಕರ್ನಾಟಕದ ಪ್ರದೇಶದ ಅಭಿವೃಧ್ಧಿಗಾಗಿ ಸಂವಿಧಾನ ಅನುಚ್ಛೇದದ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚಿಸಲಾಗಿದೆ ಎಂದ ಅವರು ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರೊಬ್ಬರನ್ನು ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ಹಾಗೂ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಚಿವರು, 12 ಜನ ಶಾಸಕರು, 2ವಿಧಾನ ಪರಿಷತ್ ಸದಸ್ಯರು, 1ಲೋಕ ಸಭಾ ಸದಸ್ಯರು, 1ಜಿಲ್ಲಾ ಪಂಚಾಯತ್ ಸದಸ್ಯರು,1ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷರು, 5ಜನ ವಿಷಯ ಪರಿಣಿತರು ಮಂಡಳಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಬೇಕು. ರಾಜ್ಯ ಸರ್ಕಾರದಿಂದ ನೀಡುವ ಅನುದಾನ ಹೆಚ್ಚಿಸ ಬೇಕು ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ಕೊಡಬೇಕು ಎಂದು ಒತ್ತಾಯಿಸಿದರು.
ಜುಲೈ 13ರಂದು ನಡೆಯಲಿರುವ ಸಭೆಗೆ ಹೋಗಬೇಡಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿ/ಕ್ರಿಯಾ ಯೋಜನೆ ಕುರಿತು ಜುಲೈ 13ರಂದು ನಡೆಯಲಿರುವ ಸಭೆಗೆ ಶಾಸಕರು, ಸಂಸದರು ಸೇರಿದಂತೆ ಯಾರು ಹೋಗ ಬಾರದು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ವಿಠ್ಠಲ್ ಸೇರಿದಂತೆ ಇತರರು ಇದ್ದರು