ಬೆಳಗಾಯಿತು ವಾರ್ತೆ
ಬಳ್ಳಾರಿ: ಇಂದಿನ ಸರ್ಕಾರದ ಆಡಳಿತಾವಧಿಯಲ್ಲಿ ದಲಿತ ಹೆಣ್ಣು ಮಕ್ಕಳ ಅತ್ಯಾಚಾರ, ದಲಿತರ ಕೊಲೆ, ಹಲ್ಲೆ, ದೌರ್ಜನ್ಯಗಳು ಹೆಚ್ಚಳವಾಗಿ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ ಜೊತೆಗೆ ದಲಿತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ ಎಂದು ದಾದಾಸಾಹೇಬ್ ಡಾ.ಎನ್.ಮೂರ್ತಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಪತ್ರಿಕಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ಹೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಚುನಾಯಿತ ಸರ್ಕಾರಗಳು ಬಂದು ಹೋದವು ಆದರೆ, ಬಡವರ ದಲಿತರ ಬವಣೆ ಸಂಕಷ್ಟಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಎಂದ ಅವರು ಸಂವಿಧಾನದ ಆಶಯದಂತೆ ತಳ ಸಮುದಾಯಗಳ ಏಳಿಗೆಗಾಗಿ ಶ್ರಮಿಸಬೇಕಾದ ಸರ್ಕಾರವು ಉಳ್ಳವರ ಮರ್ಜಿಗೆ ಬಿದ್ದಿದೆ ಎಂದರು.
ಸಮಾಜದಲ್ಲಿ ನಮ್ಮದೇಯಾದ ಹಕ್ಕನ್ನು ಚಲಾಯಿಸಲು ಪ್ರಭಾವಿ ವ್ಯಕ್ತಿಗಳು ನಮ್ಮನ್ನು ಬಿಡುತ್ತಿಲ್ಲ ಎಂದರು
ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷರಾದ ಬಸವರಾಜ ಸಾಸಲಮರಿ, ವಿಭಾಗೀಯ ಉಪಾಧ್ಯಕ್ಷ ದಾನಪ್ಪ ಗುತ್ತೇವಾರ್, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಬಂಡಾರಿ, ದಲಿತ ಮುಖಂಡರುಗಳಾದ ಕೊಂಡಯ್ಯ, ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಕೆ. ತಪ್ಪಯ್ಯ ಇದ್ದರು.