ಬಳ್ಳಾರಿ: ನಮ್ಮ ದೇಶದ ಎಲ್ಲಾ ಪ್ರಜೆಗಳು ಕಾರ್ಗಿಲ್ ಯುದ್ಧದಲ್ಲಿ ಮೃತ ಪಟ್ಟವರನ್ನು ಸ್ಮರಿಸಬೇಕು ಮತ್ತು ಸೈನಿಕರ ತೋರಿದ ಧೈರ್ಯ ಸಾಹಸಗಳಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದು ಸುಬೇದಾರ್ ಮೇಜರ್ ವಿಜೇಂದರ್ ಸಿಂಗ್ ಅವರು ಹೇಳಿದರು.
ನಗರದ ಸುಧಾ ಕ್ರಾಸ್ ನಲ್ಲಿರು ಎನ್.ಸಿ.ಸಿ. ಕಚೇರಿಯಲ್ಲಿ ಸೋಮವಾರ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬಳ್ಳಾರಿಯ ಆರ್ ವೈಎಂಇಸಿ ಕಾಲೇಜಿನ ಆರ್.ವಿ.ದೇಶಪಾಂಡೆ ಸಂಸ್ಥೆಯ ಲೀಡ್ ತಂಡದ ವಿದ್ಯಾರ್ಥಿಗಳು ವಿಶೇಷವಾಗಿ ಸೈನಿಕರಿಗಾಗಿಯೇ ತಯಾರಿಸಿದ ಹ್ಯಾಂಡ್ ಮೇಡ್ ಕಲಾಕೃತಿಗಳನ್ನು ಕೊಟ್ಟು ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟವರನ್ನು ಸ್ಮರಿಸಿ ಮತ್ತು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಬೇದಾರ್ ಮೇಜರ್ ವಿಜೇಂದರ್ ಸಿಂಗ್ ಅವರು ಮಾತನಾಡಿ 1999ರಲ್ಲಿ ಪಾಕಿಸ್ತಾನದೊಂದಿಗೆ ಭಾರತ ದೇಶ ಕಾರ್ಗಿಲ್ ಯುದ್ಧದಲ್ಲಿ ಜಯಗಳಿಸಿದ ಸಂಭ್ರಮಕ್ಕಾಗಿ ಪ್ರತಿವರ್ಷ ಜು.26ರಂದು ಕಾರ್ಗಿಲ್ ವಿಜಯ್ ದಿನ ಆಚರಣೆ ಮಾಡಲಾಗುತ್ತದೆ. ದೇಶದ ಎಲ್ಲಾ ಪ್ರಜೆಗಳು ಕಾರ್ಗಿಲ್ ಯುದ್ಧದಲ್ಲಿ ಮೃತ ಪಟ್ಟವರನ್ನು ಸ್ಮರಿಸಬೇಕು ಮತ್ತು ಯುದ್ಧದಲ್ಲಿ ಸೈನಿಕರ ತೋರಿದ ಧೈರ್ಯ ಸಾಹಸಗಳಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದರು.
ಸಹಾಯಕ ಪ್ರಾಧ್ಯಪಕರಾದ ಡಾ. ಚಿದಾನಂದ ಮಾತನಾಡಿ ಕಾರ್ಗಿಲ್ ವಿಜಯ್ ದಿವಸ ಇದೊಂದು ನಮೆಲ್ಲಾರಿಗೂ ಮರೆಯಲಾರದ ದಿನ ಕಾರ್ಗಿಲ್ ಯುದ್ಧದಲ್ಲಿ ಸೈನಿಕರು ತೋರಿದ ಧೈರ್ಯ ಸಾಹಸಗಳಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ವಿದ್ಯಾರ್ಥಿ ವಿಷ್ಣು ಪ್ರಸಾದ್ ಮಾತನಾಡಿ ಸ್ವಾಂತಂತ್ಯ ದಿನಾಚರಣೆ ಮತ್ತು ಗಣರಾಜೋತ್ಯವ ದಿನಾಚರಣೆ ಆಚರಿಸಿದಂತೆ ಕಾರ್ಗಿಲ್ ವಿಜಯ್ ದಿನವನ್ನು ರಾಷ್ಟೀಯ ಹಬ್ಬವಾಗಿ ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ಧರಣಿ, ವಿಷ್ಣು, ಶಿವಾ, ಪೂರ್ಣಿಮ, ಅನುಷಾ, ರಾಘವೇಂದ್ರ, ಸಂಜಯ್, ಮುಜಾಮಿಲ್, ಆಶಿಷ್ ನಾರಾಯಣ ಕೈಯಿಂದ ಮಾಡಿದ ಗ್ರೀಟಿಂಗ್ ಕಾರ್ಡ್ ಗಳನ್ನು ಎನ್ ಸಿಸಿ ಅಧಿಕಾರಿಗಳಿಗೆ ನೀಡಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.
ಈ ಸಂದರ್ಭದಲ್ಲಿ , ಆರ್.ವೈ. ಎಂ.ಇ.ಸಿ.ಕಾಲೇಜಿನ ಪ್ರಾಂಶುಪಾಲರಾದ ಹನುಮಂತ ರೆಡ್ಡಿ, ಚೇರ್ ಮನ್ ಗಳಾದ ಅಲ್ಲಂ ಚೆನ್ನಪ್ಪ ಸೇರಿದಂತೆ ಇತರರು ಇದ್ದರು.