ಬಳ್ಳಾರಿ: ಬಳ್ಳಾರಿ ಜಿಲ್ಲೆ ಮಾಜಿ ಸೈನಿಕರ ಮತ್ತು ವೀರ ನಾರಿಯರ ಕಲ್ಯಾಣ ಸಮಿತಿವತಿಯಿಂದ 22ನೇ ಕಾರ್ಗಿಲ್ ವಿಜಯ್ ದಿವಸ್ ದಿನಾಚರಣೆಯ ಪ್ರಯುಕ್ತ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಬಲಿಕೊಟ್ಟ ವೀರಯೋಧರ ಸ್ಮರಣೆ ಹಾಗೂ ಶ್ರದ್ಧಾಂಜಲಿ ಅರ್ಪಿಸಲು ಜು.25, 26ರಂದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾದ ಸುಬೇದಾರ್ ಮೇಜರ್ ಕೆ. ಲಕ್ಷ್ಮಣ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಬಳ್ಳಾರಿ ಬೆಳಗಾಯಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಬಲಿಕೊಟ್ಟ ವೀರಯೋಧರ ಸ್ಮರಣೆ ಹಾಗೂ ಶ್ರದ್ಧಾಂಜಲಿ ಅರ್ಪಿಸಲು 22ನೇ ಕಾರ್ಗಿಲ್ ವಿಜಯ್ ದಿವಸ ದಿನಾಚರಣೆಯನ್ನು ಜು.25ಮತ್ತು 26ರಂದು ಆಚರಿಸಲಾಗುವುದು ಎಂದರು.
ಜು.25ಮತ್ತು 26 ರಂದು ವಿವಿಧ ಕಾರ್ಯಕ್ರಮ
ಜು.25ರಂದು ಸಾಯಂಕಾಲ 6.30ಕ್ಕೆ ಮೇಣದ ಬತ್ತಿಯೊಂದಿಗೆ ವಾಲ್ಮೀಕಿ ವೃತ್ತ (ಎಸ್‌ಪಿ. ಸರ್ಕಲ್) ದಿಂದ ದುರ್ಗಮ್ಮ ಗುಡಿ ಹತ್ತಿರದ ಎಸ್ .ಪಿ. ಕಚೇರಿ ಮುಂಭಾಗದಲ್ಲಿರುವ ಅಮರ್ ಜವಾನ್ ಯುಧ್ಧ ಸ್ಮಾರಕದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜು.26ರಂದು ಬೆಳಿಗ್ಗೆ 8.30ಕ್ಕೆ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಗಣ್ಯರು,ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಸಾರ್ವಜನಿಕರಿಂದ ಪುಷ್ಪಗುಚ್ಚ ಮತ್ತು ಹೂವಿನ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೃಷ್ಣ ಚೌದರಿ, ಖಜಾಂಚಿಗಳಾದ ನಾಗರಾಜ್ ನಾಯಕ್, ಎ.ಎಂ.ಧರ್ಮರಾಜುಲು, ಆರ್.ಟಿ.ನಾಯ್ಡು, ಎಂ.ನಾಗರಾಜ, ಜಿ.ಆಂಜನೆಯಲು,ಮಧುಸೂದನ್, ಸುಭಾಷ್ ಚಂದ್ರ ಬೋಸ್, ಒಬಳೇಶ್,ರಾಮಕೃಷ್ಣ.ಜಿ ಸೇರಿದಂತೆ ಇತರರು ಇದ್ದರು.