ಬೆಂಗಳೂರು- ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳವಾರ ಸಂಜೆ ಖಾಸಗಿ ಹೊಟೇಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಕೇಂದ್ರದ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಬಸವರಾಜ ಬೊಮ್ಮಾಯಿಯನ್ನು ಪಕ್ಷ ಆಯ್ಕೆ ಮಾಡಲಾಗಿದೆ.
ಹಂಗಾಮಿ ಸಿಎಂ ಯಡಿಯೂರಪ್ಪ ನೂತನ ಸಿಎಂ ಹೆಸರನ್ನು ಬಹಿರಂಗಪಡಿಸಿದರು. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗುವ ಮೂಲಕ ಕರ್ನಾಟಕದಲ್ಲಿ ಮತ್ತೊಂದು ಐತಿಹಾಸಿಕ ರಾಜಕೀಯ ಬೆಳವಣಿಗೆ ಮರುಕಳಿಸಿದಂತಾಗುತ್ತದೆ.ಈ ಹಿಂದೆ 1988-89ರಲ್ಲಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಕರ್ನಾಟಕದ ಹದಿಮೂರನೇ ಮುಖ್ಯಮಂತ್ರಿಯಾಗಿದ್ದರು.ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕದಲ್ಲಿ ತಂದೆ-ಮಗ ಸಿಎಂ ಆದ ಉದಾಹರಣೆಯಿತ್ತು.ಇದೀಗ ಬಸವರಾಜ ಬೊಮ್ಮಾಯಿ ಸಿಎಂ ಆಗುವ ಮೂಲಕ ಈ ಸಾಧನೆ ಪುನರಾವರ್ತನೆ ಆಗಿ ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿ ತಂದೆ-ಮಗ ಸಿಎಂ ಆದ ಸಾಧನೆ ಮರುಕಳಿಸಿದಂತಾಗಿದೆ.