“ಕನ್ನಡ ಅಭಿವೃದ್ಧಿ ಪ್ರಾಧಿಕಾರ 30” ವಿಚಾರ ಸಂಕಿರಣ

0
150

ಬಳ್ಳಾರಿ: ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮುಚ್ಚಯ ಹೊರಾಂಗಣದ ಹೊಂಗಿರಣ ಸಭಾಭವನದಲ್ಲಿ ಬುಧವಾರ “ಕನ್ನಡ ಅಭಿವೃದ್ಧಿ ಪ್ರಾಧಿಕಾರ 30″ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ ಅವರು ಮಾತನಾಡಿ,ಸರ್ಕಾರ ಜಾರಿಗೆ ತಂದ ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963 ಕನ್ನಡ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನವನ್ನು ಕಲ್ಪಿಸಿತು.
ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮತೆಯನ್ನು ಈ ಅಧಿನಿಯಮವು ಪ್ರತಿಷ್ಠಾಪಿಸಿ ಜನರಾಡುವ ಭಾಷೆಯಲ್ಲಿ ಆಡಳಿತ ಯಂತ್ರದ ಕಾರ್ಯ ನಿರ್ವಹಣೆಗೆ ಅನುವು ಮಾಡಿಕೊಡುವ ವಾತಾವರಣ ಒದಗಿಸಿತು.
ಅಂದಿನ ಸಾಮಾಜಿಕ ಪ್ರಭಾವಗಳ ವ್ಯಾಪ್ತಿಯಲ್ಲಿ ಕನ್ನಡ ತನ್ನ ಪ್ರಾಮುಖ್ಯತೆ ಯನ್ನು ಉಳಿಸಿಕೊಳ್ಳಬೇಕು ಎನ್ನುವ ಸದಾಶಯವನ್ನು ಸರ್ಕಾರವು ಪರಾಮರ್ಶಿಸಿ 1992 ರಲ್ಲಿ ಕನ್ನಡ ಪ್ರಾಧಿಕಾರದ ಅಸ್ತಿತ್ವಕ್ಕೆ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಸದಸ್ಯರಾದ ಸುರೇಶ್ ಬಡಿಗೇರ, ಬಳ್ಳಾರಿ ಜಿಲ್ಲೆಯ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಅಣ್ಣಾಜಿ ಕೃಷ್ಣ ರೆಡ್ಡಿ ಸೇರಿದಂತೆ ವಿಚಾರ ಸಂಕಿರಣದಲ್ಲಿ ವಿಷಯ ಮಂಡಣೆ ಮಾಡಲು ವಿವಿಧ ವಿಶ್ವ ವಿದ್ಯಾಲಯದ ಪ್ರೊಫೆಸರ್‌ಗಳು ಹಾಜರಿದ್ದರು.

Previous articleಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ
Next articleಗುರುವಾರ ರಾತ್ರಿಯಿಂದಲೇ ಪ್ರೇಕ್ಷಕರಿಗೆ ‘… ಚಾರ್ಲಿ’ಯ ದರ್ಶನ

LEAVE A REPLY

Please enter your comment!
Please enter your name here