ಬೆಳಗಾಯಿತು ವಾರ್ತೆ
ಬಳ್ಳಾರಿ : ಕಬ್ಬು ಬೆಲೆ ನಿಗದಿಗಾಗಿ ಹಳೇ ಬಾಕಿ ಪಾವತಿಗಾಗಿ ಒತ್ತಾಯಿಸಿ ಕರ ನಿರಾಕರಣೆ ಚಳುವಳಿಯಲ್ಲಿ ಕಟ್ಟದ ಗೃಹ ವಿದ್ಯುತ್ ಬಿಲ್ ಬಲತ್ಕಾರ ವಸೂಲಿ ಕ್ರಮದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘದಿಂದ ಜು.11 ರಂದು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮುಂಖ್ಯಮಂತ್ರಿ ನಿವಾಸದ ವರೆಗು ಪ್ರತಿಭಟನೆ ನೆಡಡಸಿ ಮುಂಖ್ಯಮನತ್ರಿಗಳ ಮನೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಮ್.ಎಲ್.ಕೆ ನಾಯ್ಡು ತಿಳಿಸಿದರು.
ನಗರದ ಪತ್ರಕಭವನದಲ್ಲಿ ಗುರುವರ ಸುದ್ದಿಗಾರರೊಂದಿಗೆ ಮಾತನಡಿದ ಅವರು ಕಬ್ಬು ಬೆಳಗಾರರು ಜಿಲ್ಲಿ ಮೋಸ, ತೂಕದಲ್ಲಿ ವಂಚನೆ, ಬಾಕಿ ಪಾವತಿಯಲ್ಲಿ ವಿಳಂಬ ಇನ್ನೂ ಹತ್ತಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಶೇ ೧೦ ಇಳುವರಿಯ ಮಾನದಂಡ ಮಾಡಿಕೊಂಡು, ಕಾರ್ಖಾನೆಗೆ ಅನುಕೂಲವಾಗುವ ನೀತಿಯನ್ನು ಅನುಸರಿಸಿ ರೈತರಿಗೆ ಅನ್ಯಾಯವೆಸಗಿದೆ. ೨೦೨೨ ಫೆಬ್ರವರಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ರಸಗೊಬ್ಬರ ಮತ್ತು ಕೃಷಿಯ ಇತರೆ ಒಳಸುಳಿಗಳ ಬೆಲೆ ಗಗನಕ್ಕೇರಿಸಿ ವ್ಯವಸಾಯದ ಉತ್ಪದನಾ ವೆಚ್ಚ ದ್ವಿಗುಣಗೊಳಿಸಿತೇ ಹೊರತು ರೈತನ ಆದಾಯವನ್ನು ಕಿಂಚಿತ್ತೂ ಹೆಚ್ಚಿಸಲೇ ಇಲ್ಲ ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿ ಪ್ರಕಾರ ಎಂ.ಎಸ್.ಪಿ ಬೆಲೆ ನಿಗದಿ ಮಾಡದ ಕೇಂದ್ರ ಸರ್ಕಾರ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿದೆ. ಈ ಸಂಕಷ್ಟದಿAದಾಗಿ ನಾವು ಕಬ್ಬಿಗೆ ಕೇಳುತ್ತಿರುವುದು ಟನ್ನಿಗೆ ಕನಿಷ್ಟ ಬೆಲೆ ೪೫೦೦ ರೂ. ಮಾತ್ರ.
ರಾಜ್ಯ ಸರ್ಕಾರ ರೈತ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣ ಸಮಿತಿಯನ್ನು ಇದುವರೆವಿಗೂ ನಡೆಸಿಲ್ಲ ಎಸ್.ಎ.ಪಿ. ಯನ್ನು ಕಳೆದ ೪ ವರ್ಷಗಳಿಂದಲೂ ಘೋಷಿಸಿಲ್ಲ.
ಗೃಹ ವಿದ್ಯುತ್ ಬಾಕಿ ವಸೂಲಿ ನಿಲ್ಲಿಸಿ – ಹಿಂದಿನ ಸರ್ಕಾರದ ಮಾತಿನಂತೆ ನಡೆದುಕೊಳ್ಳಿ ವಿಶ್ವರೈತ ಚೇತನ: ಪ್ರೊ. ಎಂ.ಡಿ.ನAಜುAಡಸ್ವಾಮಿಯವರ ನೇತೃತ್ವದಲ್ಲಿ ವಿದ್ಯುತ್ ತಾರತಮ್ಯ ನೀತಿಯನ್ನು ವಿರೋಧಿಸಿ ವಿದ್ಯುತ್ ಬಿಲ್ ಪಾವತಿಸುವುದಿಲ್ಲವೆಂದು ಕರ ನಿರಾಕರಣೆ, ಚಳುವಳಿ ನಡೆಸಿತ್ತು.
ಈ ಕಾರಣ ರಾಜ್ಯ ಸರ್ಕಾರದ ಈ ಧೋರಣೆಯನ್ನು ಖಂಡಿಸಿ ರಾಜ್ಯದ ಕಬ್ಬು ಬೆಳೆಗಾರರ ರಕ್ಷಣೆಗೆ ಬರಲು ಒತ್ತಾಯಿಸಿ, ಕರ ನಿರಾಕರಣ ಚಳುವಳಿಯಲ್ಲಿ ಕಟ್ಟಿದ ಗೃಹ ವಿದ್ಯುತ್ ಬಿಲ್ಲನ್ನು ಹಿಂದಿನ ಸರ್ಕಾರದ ಒಪ್ಪಂದದAತೆ ನಡೆದುಕೊಳ್ಳಬೇಕೆಂದು ಆಗ್ರಹಿಸಿ ಜು.೧೧ ರಂದು ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಕಬ್ಬು ಬೆಳೆಗಾರರು, ವಿದ್ಯುತ್ ಬಳಕೆದಾರರು, ರೈತ ಚಳುವಳಿಗಾರರು ರಾಜ್ಯದ ಮೂಲೆ ಮೂಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದರೆ ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ. ಬೇವಿನಗಿಡದ ರ‍್ರಿಸ್ವಾಮೀ. ಮಾರೇಣ್ಣ. ವಿಶ್ವನಾಥ ಸೆರಿದಂತೆ ಇತರೆ ರೈತರು ಇದ್ದರು.