ಬಳ್ಳಾರಿ:ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಎಸ್ಪಿ ಆಫೀಸ್ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕ ಆವರಣದಲ್ಲಿ ಸನ್ಮಾರ್ಗ ಗೆಳೆಯರ ಬಳಗ ಮತ್ತು ಮಾಜಿ ಯೋಧರ ಅಸೋಸಿಯೇಷನ್ ಹಾಗೂ ಸುವರ್ಣ ಕಲಾಪೋಷಕ ಸಂಘ ಇವರ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಮತ್ತು ಯುದ್ಧ ಭೂಮಿ, ಯೋಧರ ಮತ್ತು ದೇಶ-ರಕ್ಷಣೆಯ ನಾಯಕರ ಚಿತ್ರಗಳನ್ನು ನೋಡಿ ಬರಹಗಳ ಮೂಲಕ ಹಲವಾರು ಕಲಾವಿದರಿಂದ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚೈತನ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪಿ ರಾಧಾಕೃಷ್ಣ ಅವರು ಮಾತನಾಡುತ್ತಾ ನಮ್ಮ ಯುವ ಪೀಳಿಗೆಗೆ ಹಿಂದಿನ ಪರಿಸರ ಮತ್ತು ದೇಶ ರಕ್ಷಣೆ ಮಾಡುವ ಸೈನಿಕರ ಬಗ್ಗೆ ಬಹಳಷ್ಟು ಮಾಹಿತಿ ತಿಳಿಯಬೇಕಾಗಿದೆ ಇಂತಹ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಕ್ಕಳಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಪರಿಸರವನ್ನು ನಾವು ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊಂಡು ಬಳಸೀ ಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾಗುವುದು, ಆದ್ದರಿಂದ ಗಿಡಮರಗಳನ್ನು ಪ್ರತಿಯೊಬ್ಬರು ಬೆಳೆಸಿ ಪರಿಸರ ರಕ್ಷಣೆ ಮಾಡಬೇಕೆಂದು ತಿಳಿಸಿದರು.
ಲಕ್ಷ್ಮಿಕಾಂತ ರೆಡ್ಡಿ ಅವರು ಮಾತನಾಡಿ ಕಲಾವಿದರಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಮತ್ತು ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಈ ಒಂದು ಗೋಡೆಬರಹ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರು ಸನ್ಮಾರ್ಗ ಗೆಳೆಯರ ಬಳಗ, ಸುವರ್ಣ ಕಲಾಪೋಷಕ ಸಂಘ, ಸ್ಮಿಯಾಕ್ ಟ್ರಸ್ಟ್. ಹಿರಿಯ ಕಲಾವಿದರಾದ ಎಳ್ಳಾರ್ತಿ ನರಸಿಂಹಮೂರ್ತಿ, ಮಲ್ಲಿಕಾರ್ಜುನ ಅಪಗುಂಡಿ, ಉಮೇಶ್ ಆರ್ಟ್ಸ್, ಅಬ್ದುಲ್ ಆರ್ಟ್ಸ್, ಬಾದಾಮಿ ಆರ್ಟ್ಸ್ ಬಸವರಾಜ್, ಟ್ಯಾಟು ಮಂಜು ಹಾಗೂ ಚಿತ್ರ ಕಲಾವಿದರಾದ ಸಂಜೀವಿನಿ ಜೇವಿಯರ್, ಭಾರತಿ ಬೋಯ, ಅರವಿಂದ್, ನಿಕಿತ, ಶ್ರೇಯ, ಕಾವ್ಯ, ಓಬಲೇಶ್, ಮನೋಜ್ ಕುಮಾರ್, ನವೀನ್ ಹಿಬಾರೆ, ರೀಟಾ, ರೋಜಿ, ವಂದನ, ಶಾಲಿನಿ, ಅಂಕಿತ, ಕಿಂಜಲ್, ಮೇಘನ್, ಶಿವರಾಜ್, ಸೀನಾ, ಪುನೀತ್, ಕ್ಷೇಮ ಬಾಬು ಇದ್ದರು. ಸನ್ಮಾರ್ಗ ಗೆಳೆಯರ ಬಳಗದ ಎಂಎಸ್ಸಿ ಜಗದೀಶ್, ಸಾಲ ಹನುಮಂತರೆಡ್ಡಿ ಹಾಗೂ ಕಪಗಲ್ ಚಂದ್ರಶೇಖರ್ ಆಚಾರ್, ಮಾಜಿ ಸೈನಿಕರ ಅಸೋಸಿಯೇಷನ್ ವತಿಯಿಂದ ನಾಯಕ್ ರಾಮಕೃಷ್ಣ ಕಾರ್ಯದರ್ಶಿ, ನಾಯಕ್ ಅಂಜಿನಪ್ಪ ಬಿ, ಎಚ್ ಎಂ ಟಿ ಎಮ್ ಶ್ರೀನಿವಾಸ್, ನಾಯಕ್ ನಾಗರಾಜ್ ಖಜಾಂಚಿ, ಕೆಎಲ್ಇ ನಾರಾಯಣ ಸುಬೇದಾರ್, ಆದಿನಾರಾಯಣ ಮಾಜಿ ಸೈನಿಕರು ಹಾಗೂ ಬಸವರಾಜ್ ಬಿಸಲಹಳ್ಳಿ ಉಪಸ್ಥಿತರಿದ್ದರು.