ಬೆಳಗಾಯಿತು ವಾರ್ತೆ
ಬಳ್ಳಾರಿ : ಕರ್ನಾಟಕ ಜನಶಕ್ತಿಯ 3ನೇ ರಾಜ್ಯ ಸಮ್ಮೇಳನ ಜು.3-4 ರಂದು ರಾಯಚೂರು ನ ಜಂಬಲದಿನ್ನಿ ಕಲಾ ಮಂದಿರ ನಡೆಯಲಿದೆ ಎಂದು ಕರಿಯಪ್ಪ ಗುಡಿಮನಿ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಜುಲೈ 3 ಮತ್ತು 4 ರಂದು ಕರ್ನಾಟಕ ಜನಶಕ್ತಿ 3ನೇ ರಾಜ್ಯ ಸಮ್ಮೇಳನವನ್ನು ರಾಯಚೂರಿನ ಜಂಬಲದಿನ್ನಿ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಿಂದ ಅಪಾರ ಪ್ರಮಾಣದ ಜನರು ಭಾಗವಹಿಸುವಂತೆ ಕರೆ ನೀಡಿದರು.
ಕಳೆದ ಒಂದು ದಶಕದಲ್ಲಿ ಕರ್ನಾಟಕ ಜನಶಕ್ತಿಯು ಕರ್ನಾಟಕದಲ್ಲಿ ನಡೆದ ಬಹುಪಾಲು ಚಳುವಳಿಗಳಲ್ಲಿ ತನ್ನನ್ನು ತನುಮನದ ಜೊತೆ ತೊಡಗಿಸಿಕೊಂಡು ಕೆಲಸ ಮಾಡಿದೆ ಜನಶಕ್ತಿ ತಾನು ಕೆಲಸ ಮಾಡುವ ಸಮುದಾಯದ ಅಥವಾ ಒಂದು ಸಮಸ್ಯೆಯ ಪರಿಹಾರಕ್ಕಾಗಿ ಶ್ರಮಿಸುವುದುರ ಜೊತೆಗೆ ಸಮಗ್ರ ಮತ್ತು ಅಮೂಲಾಗ್ರ ಬದಲಾವಣೆಯಲ್ಲಿ ವಿಶ್ವಾಸವಿರುವ ಸಂಘಟನೆಯಾಗಿದೆ. ಎಲ್ಲಾ ಅಸಮಾನತೆಗಳ ವಿರುದ್ಧವೂ ಜನಾಂದೋಲನಗಳು ಬಲಗೊಳ್ಳಬೇಕು ಅವುಗಳನ್ನೆಎಲ್ಲಾ ಹೊಸದು ಹೊಸ ಮಾನವ ನಾಡನ್ನು ಕಟ್ಟಲು ಬುನಾದಿ ಹಾಕಿಕೊಡಬಲ್ಲ ಮಹಾನ್ ದೋಲನ ರೂಪಿಸಲು ಶ್ರಮಿಸಬೇಕು ಎಂಬುದು ಜನಶಕ್ತಿಯ ಮೂಲ ಪರಿಕಲ್ಪನೆ ಆಗಿದೆ ಎಂದರು.
ನಂತರ ಕರ್ನಾಟಕ ಜನಶಕ್ತಿ 3ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ವಸಂತ ಕಹಳೆ. ವೆಂಕಟೇಶ್ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು. ಅಪ್ಪಾಜಿ ಸೇರಿದಂತೆ ಇನ್ನಿತರೆ ಸಂಘಟನೆಯ ಬೆಂಬಲಿಗರು ಇದ್ದರು