ನವದೆಹಲಿ: ಜನವರಿ ಮತ್ತು ಫೆಬ್ರವರಿಯಲ್ಲಿ ಲಾ ನಿನಾ ಕಾರಣದಿಂದ ಭಾರತದ ಉತ್ತರ ಭಾಗಗಳಲ್ಲಿ ತಾಪಮಾನವು 3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ ಎಂದು ಬ್ಲೂಮ್‌ಬರ್ಗ್‌ನ ವರದಿ ಹೇಳಿದೆ.
ಸಮುದ್ರ ತಳದಿಂದ ಶೀತದ ಹಾಗೂ ಆಳವಾದ ನೀರನ್ನು ಹೊರತರಲು ಸಮಭಾಜಕ ಟ್ರೇಡ್ ಮಾರುತಗಳು ಅಂದರೆ ಪೂರ್ವದಿಂದ ಬೀಸುವ ಗಾಳಿಯೂ ಬಲಗೊಂಡಾಗ ರೂಪುಗೊಳ್ಳುವ ಲಾ ನಿನಾ ಮಾದರಿಯು ಪೆಸಿಫಿಕ್‌ನಲ್ಲಿ ಹೊರಹೊಮ್ಮಿದೆ. ಇದು ವಿಶ್ವಾದ್ಯಂತ ಹವಾಮಾನ ಬದಲಾವಣೆ ಮೇಲೆ ಪರಿಣಾಮ ಬೀರುತ್ತದೆ. ಭಾರತದ ಚಳಿಗಾಲದ ಹವಾಮಾನದ ಮೇಲೆ ಪ್ರಭಾವ ಬೀರುವ ಇತರ ಅಂಶಗಳೂ ಇವೆ.
ಕಳೆದ ಕೆಲವು ವಾರಗಳಿಂದ ಭಾರತವು ಹವಾಮಾನ ವೈಪರೀತ್ಯಕ್ಕೆ ಸಾಕ್ಷಿಯಾಗಿದೆ. ಸಮುದ್ರಗಳ ಉಷ್ಣತೆ, ಅಡೆತಡೆಯಿಲ್ಲದ ಅಭಿವೃದ್ಧಿ ಮತ್ತು ಮಾನ್ಸೂನ್‌ನ ವಿಳಂಬ ಸೇರಿದಂತೆ ವಿವಿಧ ಕಾರಣಗಳು ಇದಕ್ಕೆ ಕಾರಣವೆಂದು ತಿಳಿದುಬಂದಿದೆ.