ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು
ಬಳ್ಳಾರಿ: ನಗರದ ಮೋತಿ ವೃತ್ತದ ಹತ್ತಿರದ ಬುಡಾ ಕಚೇರಿ ಆವರಣದಲ್ಲಿನ ಇಂದಿರಾ ಕ್ಯಾಂಟೀನ್ ತೆರವುಗೊಳಿಸಿ ನಗರ ಶಾಸಕರ ಮತ್ತು ಬುಡಾ ಅಧ್ಯಕ್ಷರ ಕುಮ್ಮಕ್ಕಿನಿಂದ ಆ ಸ್ಥಳದಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಶಾಸಕರ ಸಂಬಂಧಿಗಳಿಗೋಸ್ಕರ ಕಾಂಪ್ಲೇಕ್ಸ್ ಕಟ್ಟಲು ಇಂದಿರಾ ಕ್ಯಾಂಟೀನ್ ತೆರವು ಗೊಳಿಸಲಾಗುತ್ತಿದೆ ಎಂದು ಮಾಜಿ ಬುಡಾ ಅಧ್ಯಕ್ಷರಾದ ಜೆ.ಆಂಜಿನೇಯಲು ಅವರು ಆರೋಪಿಸಿದ್ದಾರೆ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಬಹುಶಃ ಆಂಜಿನೇಯಲು ಅವರಿಗೆ ಮಾಹಿತಿ ಕೊರತೆ ಇದೆ. ಮೊದಲು ಅವರು ಸರಿಯಾದ ಮಾಹಿತಿ ತಿಳಿದುಕೊಂಡು ನಂತರ ಮಾತನಾಡಲಿ ಎಂದು ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬುಡಾ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಂದಿರಾ ಕ್ಯಾಂಟೀನ್ ತೆರವು ಗೊಳಿಸಿ ಕಂಪ್ಲೇಕ್ಸ್ ಕಟ್ಟುವಂತೆ ಕೆ.ಸಿ.ಕೊಂಡಯ್ಯ ಅವರು ಪತ್ರ ಬರೆದ ಹಿನ್ನೆಲೆ ಪ್ರಾತಿಧಿಕಾರದ ಸಭೆಯಲ್ಲಿ ತೆಗೆದುಕೊಂಡು ತೀರ್ಮಾನದಂತೆ ಇಂದಿರಾ ಕ್ಯಾಂಟಿನ್ ತೆರವುಗೊಳಿಸಿ ಬುಡಾ ಆವರಣದ ಎಡಭಾಗದಲ್ಲಿ ಮರು ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರತಿ ಪಾಧಿಸಿದ ಅವರು ಈ ಕುರಿತು ಅಂದಿನ ಜಿಲ್ಲಾಧಿಕಾರಿಗಳ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ಸಹ ತರಲಾಗಿದೆ. ಅವರು ಇಂದಿರಾ ಕ್ಯಾಂಟೀನ್ ತೆರವುಗೊಳಿಸುವಂತೆ ಆದೇಶ ಸಹ ಮಾಡಿದ್ದಾರೆ.
ಆರು ಕೋಟಿ ಅನುದಾನದಲ್ಲಿ ಕಾಂಪ್ಲೇಕ್ಸ್ :ಬುಡಾಕ್ಕೆ ಆದಾಯ ಹೆಚ್ಚಿಸುವ ಉಧ್ದೇಶದಿಂದ ಆ ಸ್ಥಳದಲ್ಲಿ ಪ್ರಾಧಿಕಾರದ ವತಿಯಿಂದ ಸುಮಾರು ಆರು ಕೋಟಿ ಅನುದಾನದಲ್ಲಿ ಕಾಂಪ್ಲೇಕ್ಸ್ ಕಟ್ಪಬೇಕು ಎಂಬ ಯೋಜನೆ ಇದೆ ಆದರೆ ಅದಿನ್ನೂ ಸರ್ಕಾರದ ಹಂತದಲ್ಲಿದೆ ಎಂದು ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರು ಪ್ರತಿಪಾಧಿಸಿದರು.