ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿಯಲ್ಲಿ 414-ಕಿಲೋವ್ಯಾಟ್ ಮೇಲ್ಛಾವಣಿ ಸೋಲಾರ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಅಳವಡಿಸಿ, ಕಾರ್ಯಾರಂಭ ಮಾಡಲಾಗಿದೆ ಎಂದು ಆರ್ಬ್ ಎನರ್ಜಿ ಕಂಪನಿ ತಿಳಿಸಿತು. ಶನಿವಾರ ಅಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆರ್ಬ್ ಎನರ್ಜಿಯ ಉಪಾಧ್ಯಕ್ಷರಾದ ಟಿ. ಸುಧೀಂದ್ರ ರವರು ಮಾತವಾಡಿ ಈ ಅಳವಡಿಕೆಯು ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿ ವಿದ್ಯುತ್ ಪೂರೈಸಿಕೊಳ್ಳಲು ಸೋಲಾರ್ ವಿದ್ಯುತ್ ಅನ್ನು ಬಳಸಿಕೊಳ್ಳುವ ಮೂಲಕ ವರ್ಷಕ್ಕೆ 5.5 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುತ್ತದೆ.
ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿಯು ತನ್ನ 414-ಕಿಲೋವ್ಯಾಟ್ ಮೇಲ್ಛಾವಣಿಯ ಸೋಲಾರ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಲು, ಪೂರೈಸಲು ಮತ್ತು ಅಳವಡಿಸಲು ಆರ್ಬ್ ಎನರ್ಜಿಯನ್ನು ಆಯ್ಕೆ ಮಾಡಿಕೊಂಡಿತ್ತು ಎಂದು ತಿಳಿಸಲು ನಾವು ಅತ್ಯಂತ ಸಂತಸಗೊAಡಿದ್ದೇವೆ. ಮೇಲ್ಛಾವಣಿಯ ಸೋಲಾರ್ ಈಗ ಫ್ಯಾಕ್ಟರಿಯ ವಿದ್ಯುತ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ಅವರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ. ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿಯು ಸ್ವಚ್ಛ, ಹಸಿರು ಸೋಲಾರ್ ವಿದ್ಯುತ್‌ಗೆ ಬದಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ನಂತರ ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿಯ ವ್ಯವಸ್ಥಾಪಕ ನಿರ್ದೇಶಕರಾದ ಕೆ. ಮುರಳಿ ಕೃಷ್ಣ ಮಾತನಾಡಿ ಮೇಲ್ಛಾವಣಿಯ ಸೋಲಾರ್ ಸಾಮಾನ್ಯವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಮೂರು ವರ್ಷಗಳಲ್ಲಿ ಮರುಪಾವತಿಯನ್ನು ಒದಗಿಸಲಿದ್ದು, ಈ ಅವಧಿಯ ನಂತರ ಸೋಲಾರ್ ವಿದ್ಯುತ್ ಅವರಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಮತ್ತು ಎಲ್ಲಾ ಎಸ್.ಎಮ್.ಇ.ಗಳಿಗೆ ಮೇಲ್ಛಾವಣಿ ಸೋಲಾರ್ ಹೆಚ್ಚು ಕೈಗೆಟುಕುವಂತೆ ಮಾಡಲು, ಆರ್ಬ್ ತನ್ನದೇ ಆದ ಆಂತರಿಕ, ಮೇಲಾಧಾರ-ಮುಕ್ತ ಸೋಲಾರ್ ಹಣಕಾಸು ಸೌಲಭ್ಯವನ್ನು 5 ವರ್ಷಗಳ ಅವಧಿಗೆ ನೀಡುತ್ತದೆ.
ಆರ್ಬ್ ಎನರ್ಜಿಯು ಸಮರ್ಥವಾದ ಅಳವಡಿಕೆಯ ಪ್ರಕ್ರಿಯೆಯನ್ನು ಹೊಂದಿರುವ ಸುಸಂಘಟಿತ ಸಂಸ್ಥೆಯಾಗಿದೆ. ಆರ್ಬ್ ಎನರ್ಜಿಯನ್ನು ನಮ್ಮ ಸೋಲಾರ್ ಪಾಲುದಾರರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾವು ಸಂತಸಪಡುತ್ತೇವೆ ಮತ್ತು ಈ ಸಂಸ್ಥೆಯನ್ನು ಇತರರಿಗೂ ಶಿಫಾರಸು ಮಾಡುತ್ತೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಯ ಪ್ರಕಾಶ್ ಗುಪ್ತ , ಮೌಲಾಲಿ,ಮಂಜುನಾಥ್,ಮುರುಳಿ ಕೃಷ್ಣ, ತಿಪ್ಪೆ ಸ್ವಾಮೀ, ರಾಮೇಶ್,ಕಾಳಿಭಟ್, ವಿಕಾಸ್ ಎಲ್ ಇದ್ದರು.
ಆರ್ಬ್ ಎನರ್ಜಿಯ ಬಗ್ಗೆ ಮಾಹಿತಿ
ಆರ್ಬ್ ಎನರ್ಜಿಯನ್ನು 2006ರಲ್ಲಿ ಡಾಮಿಯನ್ ಮಿಲ್ಲರ್ ಮತ್ತು ಎನ್.ಪಿ. ರಮೇಶ್ ಅವರು ಸ್ಥಾಪಿಸಿದರು ಮತ್ತು ಆರಂಭದಿAದ ಇಲ್ಲಿಯವರೆಗೆ ಭಾರತದಲ್ಲಿ 160,000ಕ್ಕೂ ಹೆಚ್ಚು ಸೋಲಾರ್ ಸಿಸ್ಟಮ್‌ಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆಯಾಗಿ ಭಾರತದಲ್ಲಿ ಸುಮಾರು 170 ಮೆಗಾವ್ಯಾಟ್ ಮೇಲ್ಛಾವಣಿ ಸೋಲಾರ್ ಅಳವಡಿಕೆಗಳನ್ನು ಮಾಡಿದೆ. ಆರ್ಬ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ಅಲ್ಲಿ ಎರಡು ಕಾರ್ಖಾನೆಗಳನ್ನು ಹೊಂದಿದೆ: ಒಂದರಲ್ಲಿ ಸೋಲಾರ್ ಫೋಟೊವೋಲ್ಟಾಯಿಕ್ ಫಲಕಗಳನ್ನು ಉತ್ಪಾದಿಸುತ್ತದೆ, ಮತ್ತೊಂದರಲ್ಲಿ ಸೋಲಾರ್ ವಾಟರ್ ಹೀಟಿಂಗ್ ಸಿಸ್ಟಮ್‌ಗಳನ್ನು ಉತ್ಪಾದಿಸುತ್ತದೆ. ಆರ್ಬ್ ಭಾರತದಲ್ಲಿ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು ಕೀನ್ಯಾದಲ್ಲಿ ಆಫ್ರಿಕಾದ ಸೋಲಾರ್ ಮಾರುಕಟ್ಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗಸAಸ್ಥೆಯನ್ನು ಹೊಂದಿದೆ. ಆರ್ಬ್ ಎನರ್ಜಿಯ ಉತ್ಪನ್ನದ ಕೊಡುಗೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಭಾರತದಲ್ಲಿ +1-800-121-2282 ಮತ್ತು ವಿದೇಶದಿಂದ +91 9900520505ಕ್ಕೆ ಕರೆ ಮಾಡಿ ಮತ್ತು www.or energy.com ಮೂಲಕ ನಮ್ಮನ್ನು ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.