ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಡ್ ನಂ.01ರಿoದ 39ರವರೆಗಿನ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದು ಪಾಲಿಕೆಯ ಆದ್ಯ ಕರ್ತವ್ಯವಾಗಿದ್ದು, ನೀರು ಸರಬರಾಜು ಆಗುವ ಸಮಯದಲ್ಲಿ ಅನಧೀಕೃತವಾಗಿ ಮೋಟಾರ್‌ಗಳನ್ನು ಫೀಡರ್ ಲೈನ್‌ಗಳಿಗೆ ನೇರವಾಗಿ ಅಳವಡಿಸಿ ನೀರು ತುಂಬುತ್ತಿರುವುದು ಕಂಡುಬರುತ್ತಿದ್ದು,ಇದು ಕಾನೂನುಬಾಹಿರವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಈ ರೀತಿ ಅನಧೀಕೃತವಾಗಿ ಮೋಟಾರ್‌ಗಳು ಫೀಡರ್ ಲೈನ್‌ಗಳಿಗೆ ನೇರವಾಗಿ ಅಳವಡಿಸುತ್ತಿರುವ ಹಿನ್ನೆಲೆ ಕೆಳಗೆ ಇರುವ ಸಾರ್ವಜನಿಕರಿಗೆ (Down Stream) ಸಮರ್ಪಕ ನೀರು ಸರಬರಾಜುವಾಗುತ್ತಿಲ್ಲ. ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿರುವುದು ಕಂಡುಬoದಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ನಿವಾರಿಸಲು ಸಾರ್ವಜನಿಕರು ಅನಧೀಕೃತ ಮೋಟಾರ್‌ಗಳನ್ನು ಡೈರೆಕ್ಟ್ ಲೈನ್ ಬಳಸುವುದನ್ನು ಜುಲೈ 11ರೊಳಗಾಗಿ ಸಂಪೂರ್ಣವಾಗಿ ತೆಗೆಯಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ನೀರು ಸರಬರಾಜು ಪರಿವೀಕ್ಷಣೆ ವೇಳೆಯಲ್ಲಿ ಪಾಲಿಕೆಯ ಪರಿವೀಕ್ಷಣೆ ತಂಡಕ್ಕೆ ಕಂಡುಬoದಲ್ಲಿ ಸಂಬoಧಪಟ್ಟ ಮೋಟಾರ್‌ಗಳನ್ನು ಸೀಜ್ ಮಾಡಲಾಗುವುದು ಮತ್ತು ಆಯಾ ಮೋಟಾರ್‌ಗೆ ಸಂಬoಧಿಸಿದoತೆ ದಂಡವನ್ನು ವಿಧಿಸಲಾಗುವುದು. ಎಂದು ಅವರು ತಿಳಿಸಿದ್ದಾರೆ.
*ದಂಡ: 1/2 ಹೆಚ್.ಪಿ ಮೋಟಾರ್‌ಗೆ ರೂ.2 ಸಾವಿರ, 1/2 ಹೆಚ್.ಪಿ.ಯಿಂದ 1.0ಹೆಚ್.ಪಿ ಮೋಟಾರ್‌ಗೆ ರೂ.3ಸಾವಿರ, 1.0ಹೆಚ್.ಪಿ.ಕ್ಕಿಂತ ಹೆಚ್ಚಿಗೆ ಮೋಟಾರ್‌ಗೆ ರೂ.5ಸಾವಿರ ದಂಡವನ್ನು ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.