ಹರಪನಹಳ್ಳಿ: ಪಟ್ಟಣದ 25ನೇ ವಾರ್ಡ್ ತೆಕ್ಕದಗರಡಿ ಕೇರಿಯಲ್ಲಿ ಪುರಸಭೆಯ ವಿಶೇಷ ಅನುಧಾನದಲ್ಲಿ ಬೋರ್ ವೇಲ್ ಕೊರೆಸಲಾಗಿದ್ದು ನಿರೀಕ್ಷೇಗೂ ಮೀರಿದ ನೀರು ಬಿದ್ದಿದ್ದರಿಂದ ಇಲ್ಲಿಯ ನಿವಾಸಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತ್ಕರ್ ಮಾತನಾಡಿ ವಾರ್ಡ್ ಸದಸ್ಯರಾದ ಟಿ.ವೆಂಕಟೇಶ್ ಅವರು ಹಲವು ಬಾರಿ ಈ ಬೋರ್ ವೆಲ್ ಕೊರೆಸುವ ಕುರಿತು ಪ್ರಸ್ತಾಪ ಪಡಿಸಿದ್ದರು. ಹಾಗಾಗಿ ಪುರಸಭೆಯ ವಿಶೇಷ ಅನುದಾನದಲ್ಲಿ ಬೋರ್ ವೆಲ್ ಕೊರೆಸಲಾಯಿತು ಅದರಂತೆ ನೀರು ಸಹ ಬಿದ್ದಿರುವುದು ಸಂತಸ ಸಂಗತಿ ಶೀಘ್ರದಲ್ಲೇ ಸಿಸ್ಟಂ ಅಳವಡಿಸಿ ನೀರು ಪೂರೈಸಲಾಗುವುದು ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳಲಿ ಎಂದರು.
ವಾರ್ಡಿನ ಸದಸ್ಯ ಟಿ.ವೆಂಕಟೇಶ್ ಮಾತನಾಡಿ ಈ ಭಾಗದಲ್ಲಿ ಹೆಚ್ಚಾಗಿ ಬೀಡಿ ಕಾರ್ಮಿಕರು, ಕೂಲಿ ಕಾರ್ಮಿಕರು, ರೈತಾಪಿ ವರ್ಗದವರಿದ್ದು ಕೃಷಿಯನ್ನೇ ಅವಲಂಬಿಸಿದ್ದಾರೆ ಜನ, ಜಾನುವಾರುಗಳಿಗೆ ಹೊಳೆನೀರು ಇದ್ದರೂ ಸಹ ನೀರಿನ ಅಭಾವ ಹೆಚ್ಚಾಗಿತ್ತು ಕಳೆದ ಎರಡು ಬಾರಿ ಬೋರ್ ವೆಲ್ ಕೊರೆಸಿದ್ದರೂ ನೀರು ಬಿದ್ದಿರಲಿಲ್ಲ ಆದರೆ ಇಂದು ನಿರೀಕ್ಷೆಗೂ ಮೀರಿದ ನೀರು ಬಿದ್ದಿರುವುದು ನನಗೆ ಖುಷಿ ತಂದಿದೆ ಇದರಿಂದಾಗಿ ಜನ, ಜಾನುವಾರುಗಳಿಗೆ ಅನುಕೂಲವಾಯಿತು ಎಂದರು.
ಈ ವೇಳೆ ಪುರಸಭೆ ಸದಸ್ಯರಾದ ಡಿ.ಅಬ್ದುಲ್ ರೆಹಮಾನ್ ಸಾಬ್, ಕೌಟಿ ವಾಗೀಶ್, ಇಂಜಿನಿಯರ್ ಜಿ.ಯು.ಎಂ.ಸಿದ್ದೇಶ್ವರ ಸ್ವಾಮಿ, ಕೆ.ರಹಮತುಲ್ಲಾ, ದಾದಾಪೀರ್, ತಾಹೀರ್, ಮುಜುಬುರ್ ರೆಹಮಾನ್ ಸೇರಿದಂತೆ 25ನೇ ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.