ರಾಜ್ಯಮಟ್ಟದ ಗಮಕ ಪರೀಕ್ಷೆಯಲ್ಲಿ ಪಲ್ಲವಿಭಟ್ ಮತ್ತು ಸುನಿಧಿ ಭಟ್ ಪ್ರಥಮ ಸ್ಥಾನ
ಮರಿಯಮ್ಮನಹಳ್ಳಿ: ಕರ್ನಾಟಕ ಗಮಕ ಕಲಾ ಪರಿಷತ್ ನಡೆಸಿದ್ದ ರಾಜ್ಯಮಟ್ಟದ ಗಮಕ ಪರೀಕ್ಷೆಗಳಲ್ಲಿ ಮರಿಯಮ್ಮನಹಳ್ಳಿಯ ಶ್ರಿಮತಿ ಪಲ್ಲವಿಭಟ್ ಇವರು ರಾಜ್ಯಮಟ್ಟದ ಗಮಕ ಕಾಜಾಣ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಕಳೆದ ವರ್ಷದ ದೇವರನಾಮ ಪ್ರೌಢ ವಿಭಾಗದಲ್ಲೂ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲೆಗೆ ಮತ್ತು ಊರಿಗೆ ಕೀರ್ತಿ ತಂದಿದ್ದಾರೆ. ಬಳ್ಳಾರಿ ಜಿಲ್ಲಾ ಗಮಕ ಪ್ರತಿನಿಧಿಯಾದ ಇವರು ಹಲವಾರು ವಿದ್ಯಾರ್ಥಿಗಳಿಗೆ ಗಮಕ ಪಾಠಗಳನ್ನು ಮಾಡುತ್ತಾ ಪರೀಕ್ಷೆಗಳನ್ನು ಕಟ್ಟಿಸಿದ್ದಾರೆ.ಇವರ ಶಿಷ್ಯೆ ಯಾದ ಕುಮಾರಿ ಸುನಿಧಿ ಭಟ್ ಕೂಡ ಈ ವರ್ಷದ ಗಮಕ ಪ್ರವೇಶ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವುದು ವಿಶೇಷವಾಗಿದೆ. ಪಟ್ಟಣದಲ್ಲಿ ಗಮಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಮಾಡಿಸುತ್ತಿದ್ದಾರೆ.