15.8 C
New York
Wednesday, March 22, 2023

Buy now

spot_img

ಆರ್ ವೈ ಎಂ ಇ ಸಿ ಕಾಲೆಜಿನಲ್ಲಿ ಉಚಿತ ಲಸಿಕಾ ಕಾರ್ಯಕ್ರಮ

ಬಳ್ಳಾರಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಳೆ ಜುಲೈ 2 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಳ್ಯಾಣ ಇಲಾಖೆ, ವಿಮ್ಸ್,ಬಳ್ಳಾರಿ ಇವರ ಸಹಯೋಗದೊಂದಿಗೆ, ಮಹಾವಿದ್ಯಾಲಯದ ಸಿಬ್ಬಂದಿ, 18 ವರ್ಷ ಮೇಲ್ಪಟ್ಟ ವಿಧ್ಯಾರ್ಥಿವರ್ಗದವರಿಗೆ ಬೆಳಿಗ್ಗೆ 10.00 ಗಂಟೆಯಿ0ದ ಸಾಯಂಕಾಲ 4.00 ಗಂಟೆಯವರೆಗೆ ಉಚಿತ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ವೀ.ವಿ.ಸಂಘದ ನೂತನ ಪದಾದಿಕಾರಿಗಳಾದ ಹಾಗು ವೀ.ವಿ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು ಇವರುಗಳು ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಮಹಾವಿದ್ಯಾಲಯದ -ಎನ್.ಎಸ್.ಎಸ್., ಲೀಡ್, ಇಂಡಿಯನ್‌ರೆಡ್‌ಕ್ರಾಸ್‌ಸೊಸೈಟೀಸ್-ವಿಭಾಗಗಳು, ಹಾಗು ಅವುಗಳ ಸಂಯೋಜಕರಾದ ಡಾ||ಚಿದಾನಂದ, ಶ್ರೀ.ಹೆಚ್.ವಿರೂಪಾಕ್ಷ ಗೌಡರು, ಶ್ರೀ ಸುರೇಶ್, ಮತ್ತು ತಂಡಗಳು ವಿಮ್ಸ್,ಬಳ್ಳಾರಿ ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ಕಾಲೆಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,745FollowersFollow
0SubscribersSubscribe
- Advertisement -spot_img

Latest Articles