ಬಳ್ಳಾರಿ: ನಗರದ ದೇವಿನಗರದಲ್ಲಿನ ಮೇದರ್ ವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಬಿಜೆಪಿ ಯುವ ಮೋರ್ಚಾ ಬಳ್ಳಾರಿ ನಗರ ಘಟಕದ ವತಿಯಿಂದ ಹಾಗೂ ಬಿಜೆಪಿ ಯುವ ಮುಖಂಡ ವಿ.ಅನೂಪ್ ಕುಮಾರ್ ಅವರ ನೇತೃತ್ವದಲ್ಲಿ 38ನೇ ವಾರ್ಡಿನ 45ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾಗಿರುವ ಉಚಿತ ಕೋವಿಡ್ 19 ಲಸಿಕಾ ಕಾರ್ಯಕ್ರಮಕ್ಕೆ ನಗರ ಶಾಸಕ ಸೋಮಶೇಖರ ರೆಡ್ಡಿ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸೋಮ ಶೇಖರ್ ರೆಡ್ಡಿ ಮಾತನಾಡಿ ಯುವ ಬಿಜೆಪಿ ಮುಖಂಡರಾದ ವಿ.ಅನೂಪ್ ಕುಮಾರ್ ಮತ್ತು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಗರದ 38ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 45ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕಾರ್ಪೂರೇಟರ್ ಚುನಾವಣೆಯಲ್ಲಿ ಅನುಪ್ ಕುಮಾರ್ ಸೋತರು ಜನರ ಸೇವೆಯಲ್ಲಿ ಇರುತ್ತೇನೆ ವಾರ್ಡಿನಲ್ಲಿ ಕಚೇರಿಯೊಂದನ್ನು ತೆಗೆದು ಜನರ ಸಂಕಷ್ಟಗಳಿಗೆ ನೆರವಾಗುತ್ತೇನೆ ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಮುಂದಿನ ದಿನಗಳಲ್ಲಿ ಜನರ ಆಶೀರ್ವಾದದಿಂದ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸಿದರು ……
ಈ ಸಂದರ್ಭದಲ್ಲಿ ಕೆ.ಎಂ.ಎಫ್ ನಿರ್ದೇಶಕರಾದ ವೀರ ಶಂಕರ್ ರೆಡ್ಡಿ, ಬಳ್ಳಾರಿ ನಗರ ಬಿಜೆಪಿ ಮಾಧ್ಯಮ ಸಂಚಾಲಕರಾದ ರಾಜೀವ್, ಬಿಜೆಪಿ ಮುಖಂಡರಾದ ಭೀಮ ಲಿಂಗ, ಯುವ ಮೋರ್ಚಾ ನಗರ ಘಟಕ ಅಧ್ಯಕ್ಷರಾದ ಅರುಣ್ ಬಾಲಚಂದ್ರ, ನಗರ ಪ್ರಧಾನ ಕಾರ್ಯದರ್ಶಿ ಗಳಾದ ಓಂ ಪ್ರಕಾಶ್, ಉಮೇಶ್, ಸುಧಾಕರ್ ,ಸತೀಶ್, ಸವಿನಂದನ್, ಉಲ್ಲಾಸ್,ಬಿಜೆಪಿ ಮುಖಂಡರಾದ ಚಂದ್ರ, ಯಶ್ವವಂತ ಆನಂದ್, ಉಮೇಶ್, ಇತರರು ಇದ್ದರು….