ಬಳ್ಳಾರಿ: ಶ್ರೀನಿವಾಸ ಆಸ್ಪತ್ರೆ ಹಾಗೂ ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು ಅವರ ಸಂಯುಕ್ತಾಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ರೂಪನಗುಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಶಿಬಿರಕ್ಕೆ ಮಾಜಿ ಲೋಕಸಭಾ ಸದಸ್ಯರು ಜೆ. ಶಾಂತ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರೂಪನಗುಡಿ ಗ್ರಾ.ಪಂ ಅಧ್ಯಕ್ಷರಾದ ನಾಗರಾಜ ಡಾ. ಆದರ್ಶ ಡಾ. ವಿರೇಂದ್ರ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಸಾಕ್ಷಿಯಾದರು.
ಶ್ರಿನಿವಾಸ ಮಹಾ ಸಂಸ್ಥೆ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ಮುಕ್ಕ,ಸುರತ್ಕಲ್, ಮಂಗಳೂರು ಇವರಿಂದ ವಿವಿಧ ತಜ್ಞ ವೈದ್ಯಕೀಯ ಸೌಲಭ್ಯ ಇದ್ದು ಎಲ್ಲಾ ವರ್ಗದ ಜನರಿಗೆ ಚಿಕಿತ್ಸೆ ನೀಡುವ ಸಂಸ್ಥೆಯಾಗಿದೆ.
ಶಿಬಿರದಲ್ಲಿ ಜನರಲ್ ಮೆಡಿಸನ್, ಹೃದಯ ರೋಗ, ಶಸ್ತ್ರ ಚಿಕಿತ್ಸೆ, ಶ್ವಾಸ ಕೋಶ ಸಂಬAಧಿ ರೋಗ, ಚರ್ಮರೋಗ, ಸ್ತ್ರೀ ರೋಗ, ಕಿವಿ,ಮೂಗು, ಗಂಟಲು, ಮಕ್ಕಳ ಚಿಕಿತ್ಸೆ, ನೇತ್ರ ಚಿಕಿತ್ಸೆ, ಎಲುಬು, ಕೀಲು,ಸೇರಿದಂತೆ ಮುಂತಾದ ರೋಗಗಳಿಗೆ ಉಚಿತ್ಸೆ ಚಿಕಿತ್ಸೆ ನೀಡಲಾಗುತ್ತದೆ.
ಬಿಪಿಲ್ ಕಾರ್ಡ್, ಹಸಿರು ಕಾರ್ಡ್, ಅಂತ್ಯೋದಯ ಕಾರ್ಡ್,ಹೊಂದಿದವರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆಯನ್ನು ಶ್ರೀನಿವಾಸ ಆಸ್ಪತ್ರೆ, ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುವುದು ಪ್ರಯಾಣದ ವೆಚ್ಚ ಸೇರಿದಂತೆ ಔಷಧಿ, ಊಟ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುತ್ತದೆ.