ಬಳ್ಳಾರಿ: ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ನಗರದಲ್ಲಿನ ಬಡ ಮತ್ತು ಹಸಿವಿನಿಂದ ಬಳಲುತ್ತಿರುವವರಿಗೆ
ಅಖಿಲ ಭಾರತ್ ಕ್ರಿಸ್ತ ಮಹಾಸಭಾದ ಜಿಲ್ಲಾಧ್ಯಕ್ಷರಾದ
ಕಾಂತಿ ನೋವಾ ವಿಲ್ಸನ್ ಅವರ ನೇತೃತ್ವದಲ್ಲಿ ಆಹಾರ ಪ್ಯಾಕೆಟ್ ವಿತರಣೆ” ಮಾಡಲಾಯಿತು.
ನಗರದ ವಿವಿಧಡೆ ಹಸಿವಿನಿಂದ ಊಟಕ್ಕಾಗಿ ಪರದಾಡುತ್ತಿರುವವರ ಗುರುತಿಸಿದ ಅಖಿಲ ಭಾರತ್ ಕ್ರಿಸ್ತ ಮಹಾಸಭಾ ತಂಡ ಸದಸ್ಯರಾದ ಬಾಸ್ಕರ್ ಮ್ಯಾಥ್ಯೂ, ಚಂದ್ರ ನಾಗರಾಜ್ , ಪ್ರದೀಪ್ ಕುಮಾರ್ ,ಸುಧೀರ್ ಕುಮಾರ್ ,ಇನೋಶ್ ಪಾಲ್ ,ಸುಧಿಪ್ , ರವಿ, ಅಖಿಲ್ , ದಿನೇಶ್ , ಯಲಪ್ಪ, ಬ್ರೊ.ಮಧು ಡೇನಿಯಲ್ , ಸ್ವಾಮಿ ಅವರು
ನಿರ್ಗತಿಕರಿಗೆ ಆಹಾರ ಪ್ಯಾಕೇಟ್ ವಿತರಣೆ ಮಾಡಲು ನೆರವಾದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೆವ್ ಫಾದರ್ ಇವಾನ್ ಪಿಂಟೊ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಕ್ಯಾಥೊಲಿಕ್ ಡಯಾಸಿಸ್ , ರೆವ್ ಜೆಫ್ರಿ ಕುಮಾರ್ ಪ್ರೆಸ್ಬಿಟರ್- ಇನ್ಚಾರ್ಜ್ ಸಿಎಸ್ ಐ ಆಲ್ ಸೋಲ್ಸ್ ತೆಲುಗು ಚರ್ಚ್, ಕೋಟೆ, ಬಳ್ಳಾರಿ .. & … ರೆವ್. ರತ್ನ ಕುಮಾರ್ ಜಿಯಾನ್ ಮಿನಿಸ್ಟ್ರಿಸ್ ಬಳ್ಳಾರಿ ಗ್ರಾಮೀಣ ಬಳ್ಳಾರಿ ಅವರು ಎಲ್ಲಾರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಶುಭಹಾರೈಸಿದರು…….
ಈ ಸಂದರ್ಭದಲ್ಲಿ ಅಖಿಲ ಭಾರತ ಮಹಾಸಭಾದ ಸದಸ್ಯರೆಲ್ಲಾರು ಹಾಜರಿದ್ದರು…