ಕೊಟ್ಟೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ, ಕೊಟ್ಟೂರು ತಾಲೂಕಿನ ಜನರು ಮಾತ್ರ ಮಾಸ್ಕ್ ಹಾಕದೆ, ಯಾವುದೇ ನಿಯಮಗಳನ್ನು ಪಾಲಿಸದೆ, ಕೊರೊನಾ ರೋಗದ ಭಯವಿಲ್ಲದೆ ವರ್ತಿಸುತ್ತಿದ್ದ ಜನರಿಗೆ ಪೊಲೀಸ್ ಇಲಾಖೆ ರಸ್ತೆಗಿಳಿದು ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ.
ಕಳೆದ ಇಪ್ಪತ್ತು ದಿನದಿಂದ ಸ್ಥಳೀಯ ಪಟ್ಟಣ ಪಂಚಾಯತಿ ಆಡಳಿತದ ವತಿಯಿಂದ ಮಾಸ್ಕ್, ಸ್ಯಾನಿಟೈಜರ್, ಅಂತರ ಕಾಪಾಡಿಕೊಳ್ಳಲು ವಾಹನಗಳ ಮೂಲಕ ಪ್ರತಿ ದಿನ ಗಲ್ಲಿಗಲ್ಲಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಜನರಿಗೆ ಸಿಬ್ಬಂದಿಗಳು ದಂಡ ಹಾಕಲು ಮುಂದಾದಾಗ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಪೋಲಿಸ್ ಇಲಾಖೆ ರಸ್ತೆಗಿಳಿದ ಕೂಡಲೇ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿದ್ದಾರೆ.