ಎಸ್.ಎಂ.ಎಸ್ ನಿಯಮ ಪಾಲಿಸದ ಹೋಟಲ್, ಅಂಗಡಿ ಮಾಲೀಕರಿಗೆ ಎಸ್.ಎಂ.ಎಸ್ ನಿಯಮ ಪಾಲಿಸದ ಹೋಟಲ್ ,ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ ಆಯುಕ್ತರಿಂದ ಖಡಕ್ ವಾರ್ನಿಂಗ್ಖಡಕ್ ವಾರ್ನಿಂಗ್
ಬಳ್ಳಾರಿ: ಕೋವಿಡ್ ಮೂರನೇ ಅಲೆಯನ್ನು ಸಮರ್ಪಕವಾಗಿ ತಡೆಯುವ ಹಿನ್ನೆಲೆ ನಗರದ ರಾಯಲ್ ಸರ್ಕಲ್ ಬೆಂಗಳೂರ್ ರೋಡ್ ನಲ್ಲಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಕರೋನಾ ನಿಯಮಗಳನ್ನು ಉಲ್ಲಂಘಿಸಿ ಸಮಾಜಿಕ ಅಂತರ, ಮಾಸ್ಕ್ ಇಲ್ಲದೆ ಓಡಾಡುವ ಸಾರ್ವಜನಿಕರಿಗೆ ಕರೋನಾ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದ ಮಹಾನಗರ ಪಾಲಿಕೆ ಆಯುಕ್ತರಾದ ಪ್ರಿತಿ ಗೇಹ್ಲೋಟ್ ಮತ್ತು ಡಾ. ಹನುಮಂತಪ್ಪ ಅವರ ನೈತೃತ್ವದ ತಂಡ ಎಸ್. ಎಂ.ಎಸ್ ನಿಯಮ ಪಾಲಿಸದವರ ವಿರುದ್ಧ ದಂಡ ಸಹ ವಿಧಿಸಿದರು
ರಾಯಲ್ ಸರ್ಕಲ್ ಮತ್ತು ಬೆಂಗಳೂರು ರೋಡ್ ನಲ್ಲಿರುವ ಮೆಡಿಕಲ್ ಶಾಪ್, ಮೊಬೈಲ್ ಶಾಪ್, ಹೋಟಲ್, ಮೆಡಿಕಲ್ ಶಾಪ್, ಚಪ್ಪಲಿ ಅಂಗಡಿ ಬೇಕರಿ ಮುಂತಾದ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಎಸ್.ಎಂ.ಎಸ್ ನಿಯಮಗಳನ್ನು ಪಾಲಿಸದ ಮಾಸ್ಕ್ ಇಲ್ಲದೇ ಸಾಮಾಜಿಕ ಅಂತರ ಕಾಪಾಡದ ಅಂಗಡಿ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಬೆಳಗಾಯಿತು ಪತ್ರಿಕೆಯೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೇಹ್ಲೋಟ್ ಅವರು ಕೋವಿಡ್ ಮೂರನೇ ಅಲೆಯನ್ನು ಸಮರ್ಪಕವಾಗಿ ತಡೆಯುವ ಹಿನ್ನೆಲೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ
ಈ ನಿಟ್ಟಿನಲ್ಲಿ ಸೋಮುವಾರದಿಂದಲೇ ಹೆಚ್ಚಿನ ಜನಸಂದಣಿ ಇರುವ ನಗರದ ಪ್ರಮುಖ ವೃತ್ತಗಳಲ್ಲಿನ ಅಂಗಡಿ ಮುಂಗಟ್ಟುಗಳ ಭೇಟಿ ನೀಡಿ ಪರಿಶೀಲಿಸಿ ಎಸ್ .ಎಂ.ಎಸ್ ನಿಯಮ ಪಾಲಿದ ಅಂಗಡಿ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ದಂಡ ವಿಧಿಸಲಾಗುತ್ತಿದೆ ಎಂದರು.
ನಗರದಲ್ಲಿ ಕೆಲವು ಹೋಟಲ್ ಮತ್ತು ಲಾಡ್ಜ್ ಗಳಲ್ಲಿ ಕರೋನಾ ನಿಯಮಗಳನ್ನು ಪಾಲಿಸುತ್ತಿಲ್ಲ ಸರ್ಕಾರ ಶೇ.50ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಿದ್ದರು ಹೋಟಲ್ ಮತ್ತು ಲಾಡ್ಜ್ ಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ ಅಂತಹ ಹೋಟಲ್ ಲಾಡ್ಜ್ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡ ದಂಡ ಸಹ ಹಾಕಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಇದ್ದರು.