ಬಳ್ಳಾರಿ: ಭಾರತಿಯರ ಮೇಲೆ ದಬ್ಬಾಳಿಕೆ ನಡೆಸಿದ ಬ್ರಿಟಿಷ್ ಸರ್ಕಾರದಂತೆ ಕೇಂದ್ರ ಸರ್ಕಾರ ವರ್ತಿಸುತ್ತದೆ ಎಂದು ಹೋರಾಟಗಾರ ಟಿ.ಜಿ.ವಿಠಲ್ ಹೇಳಿದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ, ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಿಂದ ಬಳ್ಳಾರಿವರೆಗೆ ನಡೆಸಿದ ಪಾದಯಾತ್ರೆ ಬಳಿಕ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡ ಸಮಾರೋಪ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಕೇಂದ್ರ ಸರ್ಕಾರ ಅಂಬಾನಿ, ಅದಾನಿಯಂತಹ ಕಾರ್ಪೋರೆಟ್‌ಗಳಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲು ಹೊರಟಿದ್ದಾರೆ. ಇದು ಸರಿಯಾದ ಕ್ರಮವಲ್ಲ ಇದುವರೆಗೆ ದೆಹಲಿಯಲ್ಲಿ 400 ಕ್ಕೂ ಹೆಚ್ಚು ಹೋರಾಟನೀರತ ರೈತರು ಮೃತಪಟ್ಟಿದ್ದಾರೆ.ರೈತರ ಬಳಿ ನಾಲ್ಕು ತಿಂಗಳಿಂದ ಮೋದಿ ಮಾತುಕತೆಗೆ ಮುಂದಾಗಿಲ್ಲ ಎಂದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ, ಖಾಸಗಿಕರಣಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ದೇಶದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳು ಆರಂಭಿಸಿವೆ. ದೇಶದಲ್ಲಿರುವ ಪಕ್ಷಗಳಿಂದ ದೇಶದ ಅಳಿವು ಉಳಿವಿನ ಪ್ರಶ್ನೆ ಏಳಲಾರಂಭಿಸಿದೆ. ಪಾದಯಾತ್ರೆಯಲ್ಲಿ ನಮ್ಮ ಸಂಕಲ್ಪ ತೊರಿಸಿದ್ದೇವೆ. ಯುವಕರು ಜಾಗೃತರಾಗಿ ಹೋರಾಟಗಳ ಜವಾಬ್ದಾರಿ ವಹಿಸಿಕೊಳ್ಳಕೊಂಡು ದೇಶವನ್ನು ಕಾಪಡಬೇಕು ಎಂದರು. ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಧ್ಯಕ್ಷ ಮಾಧವರೆಡ್ಡಿ ಮಾತನಾಡಿ, ರೈತರ ಹೋರಾಟದಲ್ಲಿ ಬಹುತೇಕ ಭೂರಹಿತ ರೈತರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರಣ ಕೇಂದ್ರ ಸರ್ಕಾರ ಜನಸಾಮಾನ್ಯರ ವಿರುದ್ಧ ಅನುಸರಿಸುತ್ತಿರುವ ಕ್ರಮ. ದೇಶದಲ್ಲಿ 75 ಕೋಟಿ ಜನ ರೈತ ಭೂಮಿಯನ್ನು ಅವಲಂಭಿಸಿದೆ. ದೇಶದ ನಿಜಾವಾದ ಹೀರೊ ಅನ್ನದಾತ. ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ಯುವಕರು ಮುಂದೆ ಬನ್ನಿ ಎಂದರು. ಮಣ್ಣಿನ ಮಕ್ಕಳು ಎಂದು ಹೇಳುವ ಜನಪ್ರತಿನಿಧಿಗಳನ್ನು ನಂಬಬೇಡಿ ಎಂದರು. ಬಳ್ಳಾರಿಯ ಗಾಂಧಿ ಭವನದಲ್ಲಿ ಹಮ್ಮಿಕೊಂಡ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಹೋರಾಟಗಾರ ಟಿ.ಜಿ.ವಿಠಲ್, ಕಾರ್ಯಧ್ಯಕ್ಷ ಮಾಧವರೆಡ್ಡಿ, ಪ್ರಮುಖರಾದ ಸ.ರಾಘುನಾಥ್,ಶಶಿಕಲಾ, ಮನ್ಯಂ ಶ್ರೀಧರ್, ಇಬ್ರಾಹಿಂ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಇದ್ದರು.