ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಜ್ಯೋತಿಷಿ, ಉದ್ಯಮಿ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯ ಹೋಟೆಲ್ ವೊಂದರಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಹೋಟೆಲ್ ನ ರಿಸೆಪ್ಷನ್ ನಲ್ಲಿ ಸಾರ್ವಜನಿಕರ ಎದುರೇ ಮಧ್ಯಾಹ್ನ ೧೨.೨೪ ಗಂಟೆ ಸಮಯದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಲಾಗಿದೆ. ಹತ್ಯೆಯ ಭಯಾನಕ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೊದಲಿಗೆ ಗುರೂಜಿ ರಿಸೆಪ್ಷನ್ ಗೆ ಬಂದು ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾರೆ. ಈ ವೇಳೆ ಓರ್ವ ಗುರೂಜಿಯ ಆಶೀರ್ವಾದ ಪಡೆಯಲು ಅವರ ಕಾಲಿಗೆ ಎರಗುತ್ತಾನೆ. ಮತ್ತೊಬ್ಬ ತನ್ನ ಬಟ್ಟೆಯಲ್ಲಿ ಮುಚ್ಚಿಟ್ಟಿದ್ದ ಚಾಕುವನ್ನ ಹೊರಗೆ ತೆಗೆದು ಇರಿಯಲು ಪ್ರಾರಂಭಿಸುತ್ತಾನೆ. ಗುರೂಜಿ ನೋವಿನಿಂದ ನರಳುತ್ತಿರುವಾಗ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವರ ದೇಹದ ಮೇಲೆ ಪದೇ ಪದೇ ಚಾಕುಗಳಿಂದ ಇರಿದು ಹೋಟೆಲ್ ಅಂಗಳದಿAದ ಓಡಿಹೋಗುತ್ತಾರೆ.
ಹಠಾತ್ ದಾಳಿಯಿಂದ ಆಘಾತಕ್ಕೊಳಗಾದ ಮಹಿಳಾ ಸ್ವಾಗತಕಾರರು ಸೇರಿದಂತೆ ಕೆಲವರು ಹಂತಕರನ್ನು ತಡೆಯಲು ಮುಂದಾದ್ರೂ ಅವರಿಗೆ ಚಾಕುಗಳನ್ನು ತೋರಿಸಿ ಹಂತಕರು ಬೆದರಿಕೆ ಹಾಕುತ್ತಾರೆ. ಇಡೀ ಘಟನೆ ಒಂದು ನಿಮಿಷದಲ್ಲಿ ಮುಗಿದಿದೆ.
ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿಯವರು ಚಂದ್ರಶೇಖರ್ ಗುರೂಜಿ ಹತ್ಯೆಯನ್ನು ಬಹಳ ಹೀನವಾಗಿ ಮಾಡಿದ್ದಾರೆ. ನಾನು ಹುಬ್ಬಳ್ಳಿ ಪೊಲೀಸ್ ಆಯುಕ್ತರ ಜತೆ ಮಾತಾಡಿದ್ದೇನೆ. ಕೊಲೆಗಡುಕರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವAತೆ ಸೂಚಿಸಿದ್ದೇನೆ ಹತ್ಯೆ ಮಾಡಿದ ಕಾರಣ ಬಗ್ಗೆ ತನಿಖೆಯ ಸಂದರ್ಭದಲ್ಲಿ ಗೊತ್ತಾಗುತ್ತೆ. ಆದರೆ ಈ ರೀತಿ ಬಹಿರಂಗವಾಗಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಕೊಲೆ ಮಾಡಿದವರು ಯಾರೇ ಇದ್ರೂ ಉಗ್ರ ಶಿಕ್ಷೆ ಕೊಡಿಸಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆಎಂದು ತಿಳಿಸಿದರು