ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಆರೋಗ್ಯದ ಬಗ್ಗೆ ಹಗುರವಾಗಿ ಮಾತನಾಡಿದ ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ವಿರುದ್ಧ ಮತ್ತೆ ಗುಡುಗಿದ ಮಾಜಿ ಸಿಎಂ ಹೆಚ್ ಡಿ. ಕುಮಾರಸ್ವಾಮಿ ತಪ್ಪುಗಳನ್ನ ಅವರೇ ಮಾಡಿಕೊಂಡಿದ್ರೂ ನಮ್ಮ ಪಕ್ಷದ ಮೇಲೆ ಆರೋಪ ಮಾಡ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಣ್ಣ ಮಾತನ್ನ ನಾವು ವಿರೋಧಿಸಿದ್ರೆ, ಸಿದ್ದರಾಮಯ್ಯನವ್ರ ಸಭೆಯನ್ನ ನಿಲ್ಲಿಸಲು ಹುನ್ನಾರ ನಡೆಸಿದ್ದಾರೆ ಅಂತಾರೆ. ಅವರ ಸಭೆಯನ್ನ ದುರುಪಯೋಗ ಪಡಿಸಿಕೊಳ್ಳೋ ಅಗತ್ಯ ನನಗಿಲ್ಲ. ರಾಜಣ್ಣ ಎಸ್ ಟಿ ಜನಾಂಗದವರು. ಅವರ ಜನಾಂಗಕ್ಕೆ ಕೊಡುಗೆ ಕೊಟ್ಟಿರೋರು ಯಾರು? ದೇವೇಗೌಡ್ರು ಕೊಟ್ಟ ಕೊಡುಗೆ ಬಗ್ಗೆ ಸಿದ್ದರಾಮಯ್ಯನವ್ರಿಗೂ ಗೊತ್ತು. ೧೪ ಸೀಟು ಎಸ್ ಟಿಗೆ ಕೊಟ್ಟಿದ್ದು ದೇವೇಗೌಡ್ರು, ಅದು ಉಗ್ರಪ್ಪಗೂ ಗೊತ್ತು. ತುಮಕೂರಲ್ಲಿದ್ದು ಈ ಮನುಷ್ಯ ಮಾಡಿದ್ದೇನು?. ಅಲ್ಲಿ ತಳಜಾತಿಗಳಿಗೆ ಶಕ್ತಿ ಕೊಟ್ಟಿದ್ದು ದೇವೇಗೌಡ್ರು. ಮೀಸಲಾತಿ ವ್ಯವಸ್ಥೆ ಇಲ್ಲದೇ ಇದ್ದಾಗಲೂ ಅವಕಾಶ ಕೊಟ್ಟಿದ್ದಾರೆ ದುರಹಂಕಾರದ ಮಾತನ್ನ ಎಚ್ಚರಿಕೆಯಿಂದ ಮಾತಾಡಬೇಕು ಎಂದು ಗುಡುಗಿದರು.