ದಾಹ ನೀಗಿಸುತ್ತಿರುವ ಹೃದಯವಂತರಿಗೆ ಧನ್ಯವಾದ

0
332

ಹಿರಿಯೂರು: ನಗರದ ಖಾಸಗಿ ಬಸ್ ನಿಲ್ದಾಣದ ಹತ್ತಿರ ನಗರಕ್ಕೆ ಆಗಮಿಸುವ ಜನರಿಗಾಗಿ ಬೇಸಿಗೆಯ ಬಿಸಿಲಿನ ದಣಿವನ್ನು ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಹೃದಯವಂತರಿಗೆ ಸಾರ್ವಜನಿಕರು ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಗ್ರಾಮೀಣ ಪ್ರದೇಶದಿಂದ ತರಕಾರಿ, ಅಗತ್ಯ ವಸ್ತುಗಳನ್ನು ಖರೀದಿಸಲು ಬರುವ ನೂರಾರು ಜನರಿಗೆ ಈ ಬಿರು ಬೇಸಿಗೆಯಲ್ಲಿ ಬಾಯಾರಿಕೆ ಆಗುವುದು ಸಹಜವಾಗಿದ್ದು, ಬಿಸಿಲಿಗೆ ಬಳಲಿ ಬಾಯಾರಿ ಬರುವ ಜನರ ದಾಹವನ್ನು ತೀರಿಸಿ, ಜೀವವನ್ನು ತಂಪುಗೊಳಿಸುವ ಕಾರ್ಯ ಮಾಡುತ್ತಿರುವ ಇವರ ಸೇವೆ ನಿಜಕ್ಕೂ ಇತರರಿಗೆ ಅನುಕರಣೀಯವಾಗಿದೆ. ನೀರು ನೀಡಿ ದಾಹ ತಣಿಸುತ್ತಿರುವ ಇವರನ್ನು ಜನರು ಮನತುಂಬಿ ಹಾರೈಸಿದ್ದಾರೆ.

Previous articleನಮ್ಮ ಬೇಡಿಕೆ ಈಡೇರಿಸೋವರೆಗೆ ಮುಷ್ಕರ ಕೈಬಿಡಲ್ಲ
Next articleನೈಟ್ ಕೊರೊನಾ ಕರ್ಪ್ಯೂ ಏಪ್ರಿಲ್ 20ರ ವರೆಗೂ ಜಾರಿ‌

LEAVE A REPLY

Please enter your comment!
Please enter your name here