ಮರಿಯಮ್ಮನಹಳ್ಳಿ: ಕುಡಿಯುವ ನೀರು ದೊರೆಯದೆ ತತ್ತರಿಸಿರುವ ಕೂಡ್ಲಿಗಿ,ಮೊಳಕಾಲ್ಮುರು, ಚಳ್ಳಕೆರೆ ಮತ್ತು ಪಾವಗಡ ತಾಲೂಕುಗಳ ಜನರ ಬಹುದಿನದ ಬೇಡಿಕೆಗಳನ್ನು ಈಡೇರಿಸಲು 2500 ಕೋಟಿ ರು. ವೆಚ್ಚದ ಪಾವಗಡ ಕುಡಿಯುವ ನೀರಿನ ಯೋಜನೆ ಡಿಸೆಂಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದುಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು. ಅವರು ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶವಾದ ವ್ಯಾಸನಕೆರೆ ಬಳಿ ಪಾವಗಡ ಕುಡಿಯುವ ನೀರಿನ ಯೋಜನೆಯ ಜಾಕ್ವೇಲ್ ನಿರ್ಮಾಣದ ಕಾಮಗಾರಿ ಮತ್ತು ಯೋಜನೆಯ ಪ್ರಗತಿಯನ್ನು ಮಂಗಳವಾರ ಖುದ್ದು ವೀಕ್ಷಿಸಿದಬಳಿಕ ಮಾತನಾಡಿದರು ಅವರು, ಈ ಭಾಗದ ಜನರು ಶುದ್ಧ ಕುಡಿವ ನೀರು ದೊರೆಯದೇ ತತ್ತರಿಸುತ್ತಿದ್ದಾರೆ. ಬೇಸಿಗೆಯಲ್ಲಿ ಕುಡಿವ ನೀರು ದೊರೆಯುವುದಿಲ್ಲ. ಕೂಡ್ಲಿಗಿ, ಮೊಳಕಾಲ್ಮುರು, ಚಳ್ಳಕೆರೆಮತ್ತು ಪಾವಗಡ ತಾಲೂಕುಗಳು, ಹೊಸಪೇಟೆಯ ಚಿಲಕನಹಟ್ಟಿ, ಚಿತ್ರದುರ್ಗದ ತುರುವನೂರು ಭಾಗದ ಜನರಿಗೂ ನೀರು ದೊರೆಯುತ್ತದೆ. ಕೂಡ್ಲಿಗಿಯ ಶಿವಪುರ ಭಾಗದಲ್ಲಿ ಸ್ವಲ್ಪ ಕಾಮಗಾರಿ ಪ್ರಗತಿ ಮಂದಗತಿಯಲ್ಲಿ ಸಾಗಿದೆ.ಅಲ್ಲದೇ ವ್ಯಾಸನಕೆರೆ ಭಾಗದಲ್ಲಿ ಜಾಕ್ವೇಲ್ ನಿರ್ಮಾಣ ಕಾಮಗಾರಿ ಬಳಿಕ ಈಭಾಗದಲ್ಲೂ ಕಾಮಗಾರಿ ಪ್ರಗತಿಯಾಗಲಿದೆ.ಯೋಜನೆಯ ಸಾಕಾರಕ್ಕಿರುವ ಕೆಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.ಮೊಳಕಾಲ್ಮೂರು ತಾಲೂಕಿನ 132 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ದೊರೆಯಲಿದೆ. ಕಡಿಮೆ ಮಳೆ ಬೀಳುವ ರಾಜ್ಯದ ಮೊಳಕಾಲ್ಮೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಇದನ್ನು ಮನಗಂಡು ಮೊಳಕಾಲ್ಮೂರಿನ ಕ್ಷೇತ್ರದ ಶಾಸಕನಾಗಿ; ಮುಖ್ಯಮಂತ್ರಿಯವರ ಬಳಿ
ಚರ್ಚಿಸಿ ಮೊಳಕಾಲ್ಮೂರಿಗೂ ಕುಡಿಯುವ ನೀರು ಒದಗಿಸಲು ಶ್ರಮಿಸಿರುವೆ. ಈ ಯೋಜನೆ
ಜಾರಿಯಾದರೆ; ಈ ಜನರದಶಕಗಳ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದರು.