ಬಳ್ಳಾರಿ: ಜಿಲ್ಲಾಡಳಿತದಿಂದ ಡಿಎಂಎಫ್ ಫಂಡ್ ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ ಎಂದು ಕೆಪಿಸಿಸಿ ಸದಸ್ಯರಾದ ಕಲ್ಲು ಕಂಬ ಪಂಪಾಪತಿ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಒಂದರಿಂದ ಏಳನೇ ತರಗತಿ ವರೆಗಿನ ಎಲ್ಲಾ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಹಾಗೂ ಶಾಲೆಗೆ ಪೂರ್ಣ ಪ್ರಮಾಣ ಶಿಕ್ಷಕ ಸಿಬ್ಬಂದಿ ಒದಗಿಸಲು ಡಿಎಂಎಫ್ ಬಳಕೆ ಮಾಡಬೇಕು. ಹಾಗೂ ಹಳ್ಳಿಗಳಲ್ಲಿನ ಕೆರೆಗಳಿಗೆ, ಹಳ್ಳಗಳಿಗೆ ನೀರು ತುಂಬಿಸಲು ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲು ಉಪಯೋಗಿಸಬೇಕು. ಅಲ್ಲದೇ ಜಿಲ್ಲೆಯಲ್ಲಿನ ರೈತರಿಗೆ ನೀರಿನ ಕೊರತೆ ಇದೆ ಬೋರ್ ಹಾಕಲು ಸಹ ಕಷ್ಟವಾಗಿದೆ ಜಿಲ್ಲಾಡಳಿತ ಆ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಕೆಲಸ ಮಾಡಬೇಕಿದೆ ಎಂದರು. ಈ ಮೂರು ಸಲಹೆಗಳನ್ನು ಜಿಲ್ಲಾಡಳಿತ ಪರಿಣಿಸಬೇಕು ಎಂದರು.
ಡಿಎಂಎಫ್ ಪಂಡ್ ನಲ್ಲಿ ಇರುವ ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿ ಹಣ ಇದೆ ಅದು ಸದ್ಬಳಕೆ ಆಗಬೇಕಿದೆ. ಜಿಲ್ಲೆಯಲ್ಲಿನ ಹಿರಿಯ ಮುಖಂಡರನ್ನು ಪರಿಗಣಿಸಿದೆ ಬೇರೆ ಜಿಲ್ಲೆಯ ಮುಖಂಡರಿಗೆ ಆಯಾ ಕಟ್ಟಿನ ಹುದ್ದೆಗಳಿಗೆ ನೇಮಿಸಬಾರದು. ಹಾಗೂ ಪಕ್ಷ ಬಿಟ್ಟು ಹೋದ 17ಜನರನ್ನು ಕೆಪಿಸಿಸಿ ಅಧ್ಯಕ್ಷರು ಮತ್ತೆ ಪಕ್ಷಕ್ಕೆ ಆಹ್ವಾನ ಮಾಡಿದಂತೆ ಜಿಲ್ಲೆಯಲ್ಲಿ ಪಕ್ಷ ಬಿಟ್ಟು ಹೋದ ನಾಯಕರನ್ನು ಕರೆತರಬೇಕು ಎಂದರು.
ಸಚಿವ ಶ್ರೀ ರಾಮುಲು ಅವರು ಮೂಲತಃ ಕಾಂಗ್ರೆಸ್ ಪಕ್ಷದವರು
ಸಚಿವ ಶ್ರೀ ರಾಮುಲು ಅವರು ಮೂಲತಃ ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದಲ್ಲಿದ್ದಾಗ ಕಾರ್ಪರೇಟರ್ ಸಹ ಆಗಿದ್ದವರು ಅವರ ಕುಟಂಬದ ತಾತ ಮುತ್ತಾತ ಸಹ ನಮ್ಮ ಪಕ್ಷದಲ್ಲಿದ್ದರು ಅಂತಹ ನಿಷ್ಠಾವಂತರು ಈಗ ಮರಳಿ ನಮ್ಮ ಪಕ್ಷಕ್ಕೆ ಬರಬೇಕಿದೆ ಎಂದರು. ಪಕ್ಷದ ಮೇಲೆ ಅಭಿಮಾನ ಇದೆ ಅದಕ್ಕಾಗಿ ಒಂದಷ್ಟು ಸಲಹೆ ನೀಡುವೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಎಲ್ . ಮಾರೆಣ್ಣ, ಗುಲಾಂ ನಬೀ ಇತರರು ಇದ್ದರು.